Bengaluru Crime: ಪಾದಚಾರಿ ಮೇಲೆ ಲಾರಿ ಹರಿಸಿದ್ದ ಚಾಲಕ 11 ವರ್ಷ ಬಳಿಕ ಬಂಧನ

*   ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ
*  ಕರ್ತವ್ಯಲೋಪದ ಆರೋಪದ ಮೇರೆಗೆ 2001ರಲ್ಲಿ ಕೆಲಸ ಕಳೆದುಕೊಂಡಿದ್ದ 
*  ಪಾದಚಾರಿ ಮನೀಶಾ ಎಂಬುವರ ಮೇಲೆ ಲಾರಿ ಹರಿಸಿ ಆಕೆಯ ಸಾವಿಗೆ ಕಾರಣನಾಗಿದ್ದ

Accused Arrested For Accident Case in Bengaluru grg

ಬೆಂಗಳೂರು(ಫೆ.23): ಲಾರಿ ಅಪಘಾತ(Accident) ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಅಪರಾಧಿಯೊಬ್ಬನನ್ನು ಹನ್ನೊಂದು ವರ್ಷಗಳ ಬಳಿಕ ವಿಜಯನಗರ ಸಂಚಾರ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ.

ಮಾಗಡಿ ರಸ್ತೆಯ ಅಂಜನಾ ನಗರದ ಗೋಪಾಲಕೃಷ್ಣ(60) ಬಂಧಿತ. ಎರಡು ದಶಕ ಬಿಎಂಟಿಸಿ ಚಾಲಕನಾಗಿದ್ದ ಗೋಪಾಲಕೃಷ್ಣ, ಕರ್ತವ್ಯಲೋಪದ ಆರೋಪದ ಮೇರೆಗೆ 2001ರಲ್ಲಿ ಕೆಲಸ ಕಳೆದುಕೊಂಡಿದ್ದ. ನಂತರ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. 20007ರಲ್ಲಿ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಪಾದಚಾರಿ ಮನೀಶಾ ಎಂಬುವರ ಮೇಲೆ ಲಾರಿ ಹರಿಸಿ ಆಕೆಯ ಸಾವಿಗೆ ಕಾರಣನಾಗಿದ್ದ. ಪ್ರಕರಣದ ತನಿಖೆ(Investigation) ನಡೆಸಿ ಆತನ ಮೇಲೆ ಎಂಎಟಿಸಿ ನ್ಯಾಯಾಲಯಕ್ಕೆ(Court) ವಿಜಯನಗರ ಸಂಚಾರ ಠಾಣೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

Bengaluru Pistol Mafia: ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಪಿಸ್ತೂಲ್‌, 5 ಜೀವಂತ ಗುಂಡು ಜಪ್ತಿ: ಇಬ್ಬರ ಸೆರೆ!

ವಿಚಾರಣೆ ನಡೆಸಿದ ನ್ಯಾಯಾಲಯ, ಗೋಪಾಲಕೃಷ್ಣನಿಗೆ 1 ವರ್ಷ 6 ತಿಂಗಳು ಸಜಾ ಶಿಕ್ಷೆ ಹಾಗೂ 3 ಸಾವಿರ ರು. ದಂಡ ವಿಧಿಸಿ ಆದೇಶಿಸಿತ್ತು. ಅಲ್ಲದೆ ದಂಡ ಪಾವತಿಸದೆ ಹೋದರೆ 6 ತಿಂಗಳು ಹೆಚ್ಚುವರಿ ಸಜಾ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆ ಪ್ರಕಟ ಬಳಿಕ ಆತ ತಲೆಮರೆಸಿಕೊಂಡಿದ್ದ. ಹಲವು ಬಾರಿ ವಾರೆಂಟ್‌(Warrant) ಜಾರಿಗೊಳಿಸಿದರು ನ್ಯಾಯಾಲಯಕ್ಕೆ ಗೋಪಾಲಕೃಷ್ಣ ಹಾಜರಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿಗೆ ಹಳೇ ಪ್ರಕರಣಗಳ ಪರಿಶೀಲಿಸಿದಾಗ ಗೋಪಾಲಕೃಷ್ಣ ನಾಪತ್ತೆ ವಿಚಾರ ಗೊತ್ತಾಯಿತು. ಆಗ ಆತನ ಹುಡುಕಾಟ ಶುರು ಮಾಡಿದ ವಿಜಯನಗರ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಮಂಜುನಾಥ್‌, ಅಂಜನಾನಗರದಲ್ಲಿ ವೈದ್ಯರೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ತಿಳಿಸಿದ್ದಾರೆ.

ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು(Bike) ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಕೆಂಗೇರಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ(Chikaballapur) ಜಿಲ್ಲೆಯ ಚಿಂತಾಮಣಿ ಮೂಲದ ವೆಂಕಟಸ್ವಾಮಿ(38) ಬಂಧಿತ. ಆರೋಪಿ(Accused) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 6.7 ಲಕ್ಷ ರು. ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯು ಇತ್ತೀಚೆಗೆ ಕೆಂಗೇರಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುವಾಗ ಪೊಲೀಸರು ಗಮನಿಸಿ, ವಶಕ್ಕೆ ಪಡೆದು ಪ್ರಶ್ನಿಸಿದಾಗ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Gang Rape: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಆರೋಪಿಯು ರಾತ್ರಿ ವೇಳೆ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ(Theft). ಬಳಿಕ ಆಂಧ್ರಗಡಿ ಭಾಗಗಳಲ್ಲಿ ಗಿರಾಕಿಗಳನ್ನು ಹುಡುಕಿ 5-10 ಸಾವಿರ ರು.ಗೆ ದ್ವಿಚಕ್ರ ವಾಹನ ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡಿ ವ್ಯಯಿಸುತ್ತಿದ್ದ. ಆರೋಪಿಯ ವಿರುದ್ಧ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 70ಕ್ಕೂ ಅಧಿಕ ಕಳವು ಪ್ರಕರಣ ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ಕಳವು ಕೃತ್ಯಗಳನ್ನು ಮುಂದುವರಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ವೆಂಕಟಸ್ವಾಮಿ ಬಂಧನದಿಂದ ಕೆಂಗೇರಿ, ಬ್ಯಾಟರಾಯನಪುರ, ಕೆ.ಆರ್‌.ಪುರ, ಸಂಪಿಗೆಹಳ್ಳಿ, ಯಲಹಂಕ, ಹೆಣ್ಣೂರು, ಕಾಡುಗೋಡಿ ಮತ್ತು ಜ್ಞಾನಭಾರತಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 12 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios