ಎಮ್ಮೆ ಖರೀದಿಗೆ ಮಹಿಳೆ ಸಾಲ ಕೇಳಿದ್ದಕ್ಕೆ ಲಂಚ ಕೇಳಿದ ಅಧಿಕಾರಿ ಎಸಿಬಿ ಬಲೆಗೆ, ಉಗಿಯುತ್ತಿರೋ ಜನ..
* ಎಮ್ಮೆ ಖರೀದಿಗೆ ಮಹಿಳೆ ಸಾಲ ಕೇಳಿದ್ದಕ್ಕೆ ಲಂಚ ಕೇಳಿದ ಅಧಿಕಾರಿ ಎಸಿಬಿ ಬಲೆ
* 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ
* ವಿಜಯಪುರ ಜಿಲ್ಲೆಯ ಇಂಡಿ ವಿಭಾಗದ ದೇವರಾಜ ಅರಸು ನಿಗಮದ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ
ವಿಜಯಪುರ, (ಮಾ.14): ಎಮ್ಮೆ ಸಾಕಲು ಸಾಲ ಕೇಳಿದ್ದ ಮಹಿಳೆಗೆ ಲಂಚ ಬೇಡಿಕೆ ಇಟ್ಟ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಒಂದು ಎಮ್ಮೆ ಸಾಕಲು ಸಹಾಯ ಧನ ಹಾಗೂ ಸಾಲದ ರೂಪದಲ್ಲಿ 50 ಸಾವಿರ ರೂ. ಪಡೆಯಲು ಮಹಿಳೆಯೊಬ್ಬಳಿಗೆ 5000 ರೂ. ಲಂಚದ ಬೇಡಿಕೆ ಇಟ್ಟಿದ್ದ ಇಂಡಿ ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಬಿಲ್ಲಾಳ್ ಎಂಬುವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Bengaluru: ಒಂದು ಲಕ್ಷಕ್ಕೆ 3 ಲಕ್ಷ ಕೊಡ್ತಾರಂತೆ, ನಂಬಿ ಹಣ ಕೊಟ್ರೋ ಕೆಟ್ರಿ ಹುಷಾರ್..!
ಎಮ್ಮೆ ಖರೀದಿ ಮಾಡಲು 50 ಸಾವಿರ ಸಾಲ ಮಂಜೂರಾತಿಗೆ ಮಹಿಳೆ ಕಾಶಿಬಾಯಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ದೇವರಾಜು ಅರಸು ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಬಲ್ಲಾಳ 50 ಸಾವಿರ ಸಾಲ ಮಂಜೂರು ಮಾಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಹಿಳೆಯಿಂದ ಮೊದಲ ಕಂತಾಗಿ 3 ಸಾವಿರ ಲಂಚ ಪಡೆಯುವ ವೇಳೆ ಖದೀಮ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾನೆ.
ಈ ಕುರಿತು ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಮಹಿಳೆ ಕಾಶಿಬಾಯಿ ಪರಮಾತ್ಮ ಮಡಿವಾಳರ ಎಸಿಬಿ ಕಚೇರಿಗೆ ದೂರು ನೀಡಿದ್ದರು. ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಅಡಿಯಲ್ಲಿ ಹೈನುಗಾರಿಕೆ ಮಾಡಲು ಸಹಾಯಧನ ಮೂಲಕ ಎಮ್ಮೆ ಖರೀದಿಸಲು ಇದರ ಸಾಲ ಸೇರಿ 50 ಸಾವಿರ ರೂ.ಗಳ ಅರ್ಜಿ ಹಾಕಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು.ಸಾಲದ ಮೊತ್ತ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ದಾಖಲೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲು 5,000 ರೂ. ಲಂಚ ಕೇಳಿದ್ದರು. ಈ ಸಂಬಂಧ ಎಸಿಬಿಗೆ ದೂರು ನೀಡಿದ್ದ ಕಾಶಿಬಾಯಿ, ತನ್ನ ನಾದಿನಿ ರೇಣುಕಾ ಮೂಲಕ ಲಂಚದ ಹಣ ಮೊದಲು ಹಂತವಾಗಿ 3,000 ರೂ. ನೀಡಲು ಹೋದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಯಾನಂದ ಬಲ್ಲಾಳ್ ಅವರನ್ನ ಬಂಧಿಸಿದ್ದಾರೆ.
ಎಮ್ಮೆ ಖರೀದಿಗೆ ಸಾಲ ಕೇಳಿದ್ದಕ್ಕು ಲಂಚ ಕೇಳಿದ ಅಧಿಕಾರಿಗೆ ಜನರು ಉಗಿಯುತ್ತಿದ್ದಾರೆ. ಓರ್ವ ಮಹಿಳೆ ಸ್ವಾವಲಂಬಿ ಜೀವನ ನಡೆಸಲು ಎಮ್ಮೆ ಖರೀದಿ ಸಾಲಕ್ಕೆ ಲಂಚ ಕೇಳಿರುವುದಕ್ಕೆ ವಿಷಾದನೀಯ ಸಂಗತಿ.
ಹಲ್ಲೆಗೊಳಗಾದ ಪೇದೆ ಮತ್ತು ಪಿಐ ಸುದರ್ಶನ್ ಸಾಹಸಕ್ಕೆ ಬಹುಮಾನ
ಆನೇಕಲ್ : ಡೀಸೆಲ್ ಕದಿಯುತ್ತಿದ್ದವರ ಮೇಲೆ ಮುಗಿಬಿದ್ದ ಜಿಗಣಿ ಠಾಣೆಯ ಪೇದೆ ಕೋಟೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಐಜಿಪಿ ಚಂದ್ರಶೇಖರ್ ಜಿಗಣಿಗೆ ಭೇಟಿ ನೀಡಿ ಗಾಯಾಳು ಪೊಲೀಸ್ ಮತ್ತು ಪಿಐ ಸುದರ್ಶನ್ ಅವರಿಗೆ ರಿವಾರ್ಡ್ ಘೋಷಿಸಿದ್ದಾರೆ.
ಐಜಿಪಿ ಚಂದ್ರಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಬಗ್ಗೆ ಮಾಹಿತಿ ನೀಡಿದ ಐಜಿಪಿ ಚಂದ್ರಶೇಖರ್, ಇತ್ತೀಚೆಗೆ ನಿಂತಿರುವ ಲಾರಿಗಳು ಹಾಗೂ ಇತರ ವಾಹನಗಳಿಂದ ಡೀಸೆಲ್ ಕಳ್ಳತನ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಆದರೆ, ಯಾರೂ ಈ ಕುರಿತು ದೂರು ನೀಡಿರಲಿಲ್ಲ. ನಿನ್ನೆ ಬೆಳಗಿನ ಜಾವ ಇನ್ಸ್ಪೆಕ್ಟರ್ ಸುದರ್ಶನ್ ಅವರು ಪೆಟ್ರೋಲಿಂಗ್ನಲ್ಲಿದ್ದಾಗ ಮೈಕೋಲಾಪ್ಸ್ ಹತ್ತಿರ ನಿಂತಿದ್ದ ಟ್ರಕ್ನಿಂದ ನಾಲ್ಕು ಜನ ಡೀಸೆಲ್ ಕದಿಯುತ್ತಿರುವುದನ್ನು ಗಮನಿಸಿದ್ದಾರೆ.
ಆರೋಪಿಗಳು ಟಾಟಾ ಸುಮೋದಲ್ಲಿದ್ದರು. ಪೊಲೀಸರನ್ನು ನೋಡಿದ ತಕ್ಷಣ ನಾಲ್ವರಲ್ಲಿ ಇಬ್ಬರು ಓಡಿ ಹೋಗಿದ್ದಾರೆ. ಒಬ್ಬರು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಬೆನ್ನಟ್ಟಿದ್ದ ಪೊಲೀಸರು ಶೋಭಾ ಕಾಂಕ್ರೀಟ್ ಬ್ಲಾಕ್ಸ್ ಹತ್ತಿರ ಅವರ ಟಾಟಾ ಸುಮೋದ ಟಯರ್ಗೆ ಶೂಟ್ ಮಾಡಿದ್ದಾರೆ.