ತಲ್ವಾರ್‌ ಹಿಡಿದುಕೊಂಡು ಹೆದ್ದಾರಿಯಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಆನಂದಪುರದಲ್ಲಿ ಭಾನುವಾರ ನಡೆದಿದೆ,

ಶಿವಮೊಗ್ಗ (ಮೇ.27): ತಲ್ವಾರ್‌ ಹಿಡಿದುಕೊಂಡು ಹೆದ್ದಾರಿಯಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಆನಂದಪುರದಲ್ಲಿ ಭಾನುವಾರ ನಡೆದಿದೆ,

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುವಕನೊಬ್ಬ ತಲ್ವಾರ್‌ ಹಿಡಿದು ನಡೆದು ಹೋಗುತ್ತಿರುವುದನ್ನು ಕಾರಿನಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ತಲ್ವಾರ್‌ ಹಿಡಿದು ತೆರಳುತ್ತಿದ್ದವನನ್ನು ಸ್ಥಳೀಯರು ತಡೆದಿದ್ದಾರೆ. ಈ ವೇಳೆ ‘ನನ್ನ ತಮ್ಮನಿಗೆ ಆಕ್ಸಿಡೆಂಟ್‌ ಅಗಿದೆʼ ಎಂದು ಆತ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ

ಆತನ ಕೈಯಲ್ಲಿದ್ದ ತಲ್ವಾರ್‌ ಕಸಿದ ಸ್ಥಳೀಯರು ರಸ್ತೆಯ ಪಕ್ಕದ ಕೆರೆಗೆ ಎಸೆದಿದ್ದಾರೆ. ಬಳಿಕ ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಆ ಯುವಕನನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಆನಂದಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕ ತಲ್ವಾರ್‌ ಬೀಸುತ್ತ ಓಡಾಡಿದ್ದರಿಂದ ಆನಂದಪುರದಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಸದ್ಯ ಇದರ ವಿಡಿಯೋ ವೈರಲ್‌ ಆಗಿದೆ.