ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವೆ ಎಂದು ನಂಬಿಸಿ ₹50,000 ಟೋಪಿ!
ನಗದು ನೀಡಿದರೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ₹50 ಸಾವಿರ ಪಡೆದು ಕಿಡಿಗೇಡಿಯೊಬ್ಬ ವಂಚಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಡಿ.8) : ನಗದು ನೀಡಿದರೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ₹50 ಸಾವಿರ ಪಡೆದು ಕಿಡಿಗೇಡಿಯೊಬ್ಬ ವಂಚಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಾಲ್‌ಬಾಗ್ ರಸ್ತೆಯ ಸುಧಾನಗರದ ನಿವಾಸಿ ಬಿ.ಚಂದ್ರೇಗೌಡ ಮೋಸ ಹೋಗಿದ್ದು, ಎರಡು ದಿನಗಳ ಹಿಂದೆ ಎಟಿಎಂಗೆ ಹಣ ಜಮೆ ಮಾಡಲು ಅವರು ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!
ತುರ್ತು ಕಷ್ಟದ ಹೇಳಿ ಹಣ ಲಪಾಟಿಯಿಸಿದ:
ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿರುವ ಚಂದ್ರೇಗೌಡ, ಸುಧಾಮನಗರದಲ್ಲಿ ನೆಲೆಸಿದ್ದಾರೆ. ಡಿ.5ರಂದು ಶಾಂತಿನಗರದ ಖಾಸಗಿ ಬ್ಯಾಂಕ್ ಖಾತೆಗೆ ತಮ್ಮ ಕಂಪನಿ ಖಾತೆಗೆ ₹50 ಸಾವಿರ ಜಮೆ ಮಾಡಲು ಚಂದ್ರೇಗೌಡ ತೆರಳಿದ್ದರು. ಆ ವೇಳೆ ಎಟಿಎಂ ಘಟಕದ ಬಳಿ ಎದುರಾದ ಅಪರಿಚಿತ, ‘ಸರ್ ನನಗೆ ತುರ್ತಾಗಿ ₹50 ಸಾವಿರ ನಗದು ಬೇಕಿದೆ. ಆದರೆ ತಾಂತ್ರಿಕ ತೊಂದರೆಯಿಂದ ನನ್ನ ಖಾತೆಯಿಂದ ಎಟಿಎಂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್
ನೀವು ನಗದು ನೀಡಿದರೆ ತಕ್ಷಣವೇ ನಾನು ಆನ್‌ಲೈನ್‌ನಲ್ಲಿ ಆ ಹಣ ವರ್ಗಾಯಿಸುತ್ತೇನೆ’ ಎಂದು ಕೋರಿದ್ದಾನೆ. ಈ ಮಾತು ನಂಬಿದ ಚಂದ್ರೇಗೌಡ ಅವರು, ತಮ್ಮಲ್ಲಿದ್ದ ₹50 ಸಾವಿರವನ್ನು ಕೊಟ್ಟಿದ್ದಾರೆ. ಹೀಗೆ ಹಣ ಪಡೆದ ಬಳಿಕ ಆತ ನಾಪತ್ತೆಯಾಗಿದ್ದಾನೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿ ಅಶೋಕನಗರ ಠಾಣೆಗೆ ತೆರಳಿ ಚಂದ್ರೇಗೌಡ ದೂರು ದಾಖಲಿಸಿದ್ದಾರೆ.