Asianet Suvarna News Asianet Suvarna News

ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ ಕೂದಲು ಸಿಲುಕಿ ಮಹಿಳೆ ಸಾವು!

ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಪೀಣ್ಯ ಬಳಿಯ ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ

A woman died after her hair stuck in the paint mixer peenya shree paint factory rav
Author
First Published Nov 9, 2023, 12:38 PM IST

ಬೆಂಗಳೂರು (ನ.9): ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಪೀಣ್ಯ ಬಳಿಯ ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ.

ಶ್ವೇತಾ (34) ದುರ್ಮರಣ. ಗಂಡ ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದ ಶ್ವೇತಾ, ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ. ಎಂದಿನಂತೆ  ಬಣ್ಣ ಗಟ್ಟಿಯಾಗ್ತಿದ್ರಿಂದ ಚೆಕ್ ಮಾಡೋಕೆ ಗ್ರೈಂಡರ್ ಹತ್ರ ಬಗ್ಗಿರುವ ಮಹಿಳೆ. ಈ ವೇಳೆ ಮಹಿಳೆಯ ಜಡೆ ಗ್ರೈಂಡರ್‌ಗೆ ಸಿಲುಕಿದೆ. ಮಹಿಳೆ ಕೂಗಿಕೊಂಡ್ರೂ ಕೂಡ ಗ್ರೈಂಡರ್ ಸೌಂಡ್‌ನಿಂದ ಯಾರಿಗೂ ಕೇಳಿಸಿಲ್ಲ. ಉಳಿದ ಕೆಲಸಗಾರರು ಗ್ರೈಂಡರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಫ್ರೀಡಂ ಪಾರ್ಕ್‌ ಪ್ರತಿಭಟನೆಗೆ ತೆರಳುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರು ಸಾವು!

ಅನುಮಾನಾಸ್ಪದ ಸರ್ಕಾರಿ ನೌಕರ ಸಾವು

ತುಮಕೂರು: ಸರ್ಕಾರಿ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಉಪ್ಪಾರಹಳ್ಳಿ ಬಳಿ ನಡೆದಿದೆ. ತುಮಕೂರಿನ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಎಫ್‌ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದ ಹರೀಶ್‌(45) ಮೃತ ದುರ್ದೈವಿ. ಬೆಳಿಗ್ಗೆ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಕಂಠ ಪೂರ್ತಿ ಕುಡಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಇಎ ಪರೀಕ್ಷಾ ಅಕ್ರಮ: ಅಕ್ರಮಕ್ಕೆಂದೇ ಹೊಸ ಮೊಬೈಲ್‌ ಖರೀದಿ, ಸಿಮ್‌ ಕಾರ್ಡ್‌ ಹಾಕದೆ ವೈಫೈ ಬಳಕೆ

Follow Us:
Download App:
  • android
  • ios