ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗ ಕೆರೆಗೆ ಬಿದ್ದು ಮೃತಪಟ್ಟಘಟನೆ ಇಲ್ಲಿನ ಕೋಟದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರು ಗಣೇಶ್‌ ಅಧಿಕಾರಿ (76). ಅವರು ತನ್ನ ತಾಯಿಯ ಶ್ರಾದ್ಧ ಕಾರ್ಯ ಮುಗಿಸಿ, ಸಂಪ್ರದಾಯದಂತೆ ಸಂಜೆ 5.30ಕ್ಕೆ ಪಿಂಡ ಪ್ರದಾನ ಮಾಡಲು ಮನೆ ಬಳಿಯ ಕೆರೆಗೆ ಹೋಗಿದ್ದಾಗ ಸಾವು.

ಕೋಟ (ಜು.20): ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗ ಕೆರೆಗೆ ಬಿದ್ದು ಮೃತಪಟ್ಟಘಟನೆ ಇಲ್ಲಿನ ಕೋಟದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರು ಗಣೇಶ್‌ ಅಧಿಕಾರಿ (76). ಅವರು ತನ್ನ ತಾಯಿಯ ಶ್ರಾದ್ಧ ಕಾರ್ಯ ಮುಗಿಸಿ, ಸಂಪ್ರದಾಯದಂತೆ ಸಂಜೆ 5.30ಕ್ಕೆ ಪಿಂಡ ಪ್ರದಾನ ಮಾಡಲು ಮನೆ ಬಳಿಯ ಕೆರೆಗೆ ಹೋಗಿದ್ದರು. ಅರ್ಧ ಗಂಟೆಯಾದರೂ ಅವರು ಮನೆಗೆ ಹಿಂತಿರುಗದಿದ್ದಾಗ ಮಗ ಹೋಗಿ ನೋಡಿದಾಗ ಅವರ ಶವವು ಕೆರೆಯಲ್ಲಿ ಬೋರಲಾಗಿ ತೇಲುತಿತ್ತು. ಅವರು ಪಿಂಡ ಹಾಕಲು ಹೋದಾಗ, ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮುಳುಗಿ ಉಸಿರುಕಟ್ಟಿಮೃತಪಟ್ಟಿದ್ದಾರೆ ಎಂದು ಕೋಟ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಚರಂಡಿ ಹೊಂಡದಲ್ಲಿ ಮಹಿಳೆ ಮೃತದೇಹ ಪತ್ತೆ

ಮೂಲ್ಕಿ: ಪಡುಪಣಂಬೂರು ಒಳ ಪೇಟೆಯ ಸಂತೆಕಟ್ಟೆಬಳಿಯ ಪುಷ್ಪರಾಜ್‌ ಅಮೀನ್‌ ಎಂಬವರ ಮನೆಯ ಹಿಂದುಗಡೆ ಡ್ರೈನೇಜ್‌ ಪಿಟ್‌ನಲ್ಲಿ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಡು ಪಣಂಬೂರು ಕಲ್ಲಾಪು ಬಳಿಯ ನಾಗಮ್ಮ ಶೆಟ್ಟಿಗಾರ್‌ (85) ಮೃತರು. ಅವರು ನಾಲ್ಕು ತಿಂಗಳಿಂದ ಮನೆಯಿಂದ ನಾಪತ್ತೆಯಾಗಿದ್ದರು. ಪುಷ್ಪರಾಜ್‌ ಅಮೀನ್‌ ಮುಂಬೈಯಲ್ಲಿ ವಾಸವಾಗಿದ್ದು ಆಗೊಮ್ಮೆ ಈಗೊಮ್ಮೆ ಪಡುಪಣಂಬೂರಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು. ಎರಡು ದಿನಗಳ ಹಿಂದೆ ಪುಷ್ಪರಾಜ್‌ ಅಮೀನ್‌ ಊರಿಗೆ ಬಂದಿದ್ದು ಬುಧವಾರ ಬೆಳಗ್ಗೆ ಮನೆಯವರು ಮನೆಯ ಹಿಂದುಗಡೆ ಇರುವ ಸಣ್ಣ ಡ್ರೈನೇಜ್‌ ಪಿಟ್‌ನಲ್ಲಿ ನಾಗಮ್ಮ ಶೆಟ್ಟಿಗಾರ ಮೃತದೇಹ ಪತ್ತೆಯಾಗಿದೆ. ಮಹಿಳೆ ಪಿಟ್‌ ಮೇಲಿನ ತಗಡಿನ ಶೀಟ್‌ನಲ್ಲಿ ಇಟ್ಟಿದ್ದು ಕಾಲು ಜಾರಿ ಪಿಟ್‌ ಒಳಗಡೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎತ್ತು ಕಳ್ಳನ ಹಿಡಿದು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ

ಬೈಕ್‌ ಸ್ಕಿಡ್‌ ಆಗಿ ಪಲ್ಟಿ: ಸವಾರ ವಿದ್ಯಾರ್ಥಿ ಸಾವು

ಮಂಗಳೂರು: ಅಡ್ಯಾರು ಬಳಿಯ ಕಾಲೇಜಿನ ಮುಂಭಾಗ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದು ಸವಾರ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಘಟನೆ ಬುಧವಾರ ಸಂಭವಿಸಿದೆ.

ವಳಚ್ಚಿಲ್‌ ಶ್ರೀನಿವಾಸ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ, ಕೇರಳ ಮೂಲದ ಮಹಮ್ಮದ್‌ ನಶತ್‌(21) ಮೃತಪಟ್ಟದುರ್ಧೈವಿ. ಈತ ಪಡೀಲ್‌ ಕಡೆಯಿಂದ ವಳಚ್ಚಿಲ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸ್ಕಿಡ್‌ ಆಗಿದೆ. ಆಗ ಬೈಕ್‌ ರಸ್ತೆಬದಿಯ ಡಿವೈಡರ್‌ಗೆ ಬಡಿದು ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಈತ ಮೃತಪಟ್ಟಿದ್ದಾನೆ. ಮಂಗಳೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಾಯ​ಚೂರು: ಹಣ​ಕ್ಕಾಗಿ ತಂದೆಯನ್ನೇ ಕೊಂದು ರಸ್ತೆ ಪಕ್ಕ ಹೂತಿಟ್ಟ ಪಾಪಿ ಮಗ..!