ಬಂದಿದ್ದು ಸೈಕಲ್ ಮೇಲೆ; ಹೋಗಿದ್ದು ಬೈಕ್‌ ಮೇಲೆ! ಧಾರವಾಡದೊಲ್ಲೊಬ್ಬ ಖತರ್ನಾಕ್ ಕಳ್ಳ!

ಸೈಕಲ್‌ ಮೇಲೆ ಬಂದು ದ್ವಿಚಕ್ರ ವಾಹನ ಕದ್ದೊಯ್ದ ಘಟನೆ ಇಲ್ಲಿನ ಡಿಪೋ ಸರ್ಕಲ್‌ ಮುಖ್ಯ ರಸ್ತೆಯಲ್ಲಿ ನಡೆದಿದೆ.

A thief came on a bicycle and stole the bike  at dharwad rav

ಧಾರವಾಡ (ಮಾ.15): ಸುಲಭವಾಗಿ ಹಣ ಗಳಿಸಲೆಂದು ಕಳ್ಳತನಕ್ಕೆ ಇಳಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಿನ ಬೆಳಗಾದರೆ ಪತ್ರಿಕೆಯ ಮೊದಲೆರಡು ಪುಟ ಕಳ್ಳತನ, ಧರೋಡೆ, ಕೊಲೆಯಂತಹ ಅಪರಾಧ ಸುದ್ದಿಗಳಿಂದಲೇ ತುಂಬಿಹೋಗಿರುತ್ತದೆ. ಕಳ್ಳತನ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ. 

ಇಲ್ಲೊಬ್ಬ ಸೈಕಲ್‌ ಮೇಲೆ ಬಂದು ದ್ವಿಚಕ್ರ ವಾಹನ ಕದ್ದೊಯ್ದ ಘಟನೆ ಇಲ್ಲಿನ ಡಿಪೋ ಸರ್ಕಲ್‌ ಮುಖ್ಯ ರಸ್ತೆಯಲ್ಲಿ ನಡೆದಿದೆ. ಧಾರವಾಡ ಡಿಪೋ ಸರ್ಕಲ್‌ ನಿವಾಸಿ ಮಲ್ಲೇಶಪ್ಪ ನೂಲ್ವಿ ಎಂಬುವವರ ಮನೆ ಮುಂದಿಟ್ಟದ್ವಿಚಕ್ರ ವಾಹನ ( ಎಕ್ಸೆಲ್‌ ಸ್ಕೂಟರ್‌ ) ಕಳ್ಳತನವಾಗಿದೆ. ಮಧ್ಯರಾತ್ರಿ ಸೈಕಲ್‌ ಮೇಲೆ ಬಂದಿರುವ ಕಳ್ಳ ಮನೆ ಮುಂದಿಟ್ಟಎಕ್ಸಲ್‌ ಸ್ಕೂಟರ್‌ ಎಗರಿಸಿ ಪರಾರಿಯಾಗಿದ್ದಾನೆ. ವಾಪಸ್‌ ಹೋಗುವಾಗ ಸ್ಕೂಟರ್‌ ಮೇಲೆ ಸೈಕಲ್‌ ಹಾಕೊಕೊಂಡು ಹೋಗಿರುವ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡ ನಗರದ ಪ್ರಮುಖ ರಸ್ತೆಯಾಗಿದ್ದರೂ ರಾಜಾರೋಷವಾಗಿ ಕಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮಹಿಳೆಗೆ 1.55 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಕೆವೈಸಿ ಅಪಡೇಟ್‌(KYC Update) ಹೆಸರಿನಲ್ಲಿ ನಗರದ ಮಹಿಳೆಯೊಬ್ಬರಿಗೆ .1,55,999 ವಂಚಿಸಿರುವ ಕುರಿತು ಇಲ್ಲಿನ ಹುಬ್ಬಳ್ಳಿ-ಧಾರವಾಡ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮಂಜು ಎಸ್‌. ಎಂಬವರು ವಂಚನೆಗೊಳಗಾದವರು. ಯಾರೋ ಅಪರಿಚಿತರು ಕರೆ ಮಾಡಿ ಬ್ಯಾಂಕಿನವರೆಂದು ಹೇಳಿಕೊಂಡು ಕೆವೈಸಿ ಅಪಡೇಟ್‌ ಮಾಡುವುದಿದೆ ಎಂದು ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

 

ಕುರುಬನ ರಾಣಿಯ ಖಾತೆಗೆ ಸೈಬರ್‌ ಕಳ್ಳರ ಕನ್ನ, 1 ಲಕ್ಷ ಕಳೆದುಕೊಂಡ ನಟಿ ನಗ್ಮಾ!

Latest Videos
Follow Us:
Download App:
  • android
  • ios