ಮರದ ದಿಮ್ಮಿ ತುಂಬಿಕೊಂಡು ಹೋಗ್ತಿದ್ದ ಲಾರಿ ಪಲ್ಟಿಯಾಗಿರುವಂತಹ ಘಟನೆ ಬೆಂಗಳೂರಿನ ನಾಗರಬಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಸುಂಕದ ಕಟ್ಟೆಯಿಂದ ನಾಗರಬಾವಿ ಕಡೆ ಆಂಧ್ರ ಪ್ರದೇಶದ ಲಾರಿ ಬರ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತವಾಗಿದೆ.
ಬೆಂಗಳೂರು (ಜು.22): ಮರದ ದಿಮ್ಮಿ ತುಂಬಿಕೊಂಡು ಹೋಗ್ತಿದ್ದ ಲಾರಿ ಪಲ್ಟಿಯಾಗಿರುವಂತಹ ಘಟನೆ ಬೆಂಗಳೂರಿನ ನಾಗರಬಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಸುಂಕದ ಕಟ್ಟೆಯಿಂದ ನಾಗರಬಾವಿ ಕಡೆ ಆಂಧ್ರ ಪ್ರದೇಶದ ಲಾರಿ ಬರ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತವಾಗಿದೆ. ಲಾರಿ ಮಗುಚಿಕೊಳ್ತಿದ್ದಂತೆ ಮರದ ದಿಮ್ಮಿ ಫ್ಲೈ ಓವರ್‌ನಿಂದ ಕೆಳಕ್ಕೆ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸ್ತಿದ್ದ ಇಬ್ಬರು ಬೈಕ್ ಸವಾರರ ಮೇಲೆ ಮರದ ದಿಮ್ಮಿ ಬಿದ್ದಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗಾಯಗೊಂಡ ಇನ್ನೊಬ್ಬ ಸವಾರನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ದೌಡಯಿಸಿದ್ದಾರೆ. ತಮಿಳುನಾಡು ಮೂಲದ ಸುಖೇಶ್ ಮೃತ ಬೈಕ್ ಸವಾರನಾಗಿದ್ದು, ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ, ಈ ವೇಳೆ ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿಯಾಗಿ ದಿಮ್ಮಿ ಬೈಕ್ ಸವಾರನ ಮೇಲೆ ಬಿದ್ದು ಸಾವನಪ್ಪಿದ್ದಾನೆ. ನಾಗರಭಾವಿ ಸರ್ಕಲ್ ಬಳಿಯ ಔಟರ್ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದ್ದು, ರಿಂಗ್ ರಸ್ತೆ ಕ್ಲೋಸ್ ಮಾಡಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!
ಇನ್ನು ಸುಂಕದಕಟ್ಟೆ ಕಡೆಯಿಂದ ನಾಯಂಡಹಳ್ಳಿ ಕಡೆ ಬರುತ್ತಿದ್ದ ಲಾರಿಯು ನಾಗರಭಾವಿ ರಿಂಗ್ ರಸ್ತೆಯ ಟರ್ನಿಂಗ್‌ನಲ್ಲಿ ಪಲ್ಟಿ ಹೊಡೆದು ಮತ್ತೊಂದು ಬದಿ ರಸ್ತೆಗೆ ಮರದ ದಿಮ್ಮಿಗಳು ಬಿದ್ದಿವೆ. ಈ ವೇಳೆ ನಾಯಂಡಹಳ್ಳಿಯಿಂದ ಸುಂಕದಕಟ್ಟೆ ಕಡೆ ಹೊರಟಿದ್ದ ಎರಡು ಬೈಕ್‌ಗಳ ಮೇಲೆ ಮರದ ದಿಮ್ಮಿಗಳು ಬಿದ್ದಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ 20ಕ್ಕೂ ಹೆಚ್ಚು ಮರದ ದಿಮ್ಮಿಗಳು ಬಿದ್ದಿವೆ, ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಲಾರಿ ಬರುತ್ತಿತ್ತು.
