ಕಾರವಾರ/ ಯಲ್ಲಾಪುರ(ಫೆ.  26) ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಕಿರಿಕಿರಿ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಅತ್ಯಾಚಾರದ ನಾಟಕವಾಡಿದ್ದು ಬೆಳಕಿಗೆ ಬಂದಿದೆ. ಪಾಲಕರ ಕಣ್ತಿಪ್ಪಿಸಿ ಕಾಡಿನಲ್ಲಿ ಅಡಗಿ ಕುಳಿತಿದ್ದು  ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದಿದ್ದಳು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಪ್ರಕರಣ ಸುದ್ದಿಯಾಗಿದೆ. ಆದರೆ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅಸಲಿ ಕತೆ ಗೊತ್ತಾಗಿದೆ ಹತ್ತನೇ ತರಗತಿ ಓದುತಿದ್ದ ವಿದ್ಯಾರ್ಥಿನಿ ಸರಿಯಾಗಿ ಹೋಂ ವರ್ಕ್ ಮಾಡೋದಿಲ್ಲ ಎಂದು ಮುಖ್ಯ ಶಿಕ್ಷಕ ಪಾಲಕರಿಗೆ ದೂರು ನೀಡಿದ್ದರು. ಹೀಗಾಗಿ ವಿದ್ಯಾರ್ಥಿನಿಯನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು.

ಶಿರಸಿ; ಗಂಡ ಸಮಯಕ್ಕೆ ಮನೆಗೆ ಬರಲಿಲ್ಲವೆಂದು  ಪತ್ನಿ ನೇಣಿಗೆ ಶರಣು

ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಮನೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಅವಿತು ಕುಳಿತಿದ್ದಳು. ಸಂಜೆ ವೇಳೆ ಎಷ್ಟು ಹೊತ್ತಾದರೂ ವಿದ್ಯಾರ್ಥಿನಿ ಮನೆಗೆ ಬಾರದ್ದರಿಂದ  ಪೋಷಕರು ಭೀತಿಗೊಳಗಾಗಿದ್ದಾರೆ.  ವಿದ್ಯಾರ್ಥಿನಿಯ ಅಪಹರಣ ಆಗಿರಬೇಕೆಂದು ಯೋಚಿಸಿ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು.

ಈ ವೇಳೆ ಕಾಡಿನಲ್ಲಿ ಹುಡುಕಿದಾಗ ವಿದ್ಯಾರ್ಥಿನಿ ತಾನೇ ಕೈ ಕಾಲುಗಳಿಗೆ ಹಗ್ಗ ಸುತ್ತಿಕೊಂಡು ಪೊಲೀಸರಲ್ಲಿ ಅತ್ಯಾಚಾರದ ಕಥೆ ಹೇಳಿದ್ದಳು. ಆದರೆ, ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರವಾಗಿಲ್ಲ ಎಂಬ ವರದಿ ಬಂದಿತ್ತು ಪೊಲೀಸರು ತನಿಖೆ ನಡೆಸಿದಾಗ ವಿದ್ಯಾರ್ಥಿನಿಯ ನೈಜ ಬಣ್ಣ ಬಯಲಾಗಿದ್ದು  ಘಟನೆ ಸಂಬಂಧಿಸಿ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.