ಬೆಳಗಾವಿ: ಮಹಿಳೆಯನ್ನು ಚಟ್ಟದ ಮೇಲೆ ಆಸ್ಪತ್ರೆಗೆ ಕರೆತಂದ ಜನ : ಚಿಕಿತ್ಸೆ ಫಲಿಸದೇ ಸಾವು!

ಅನಾರೋಗ್ಯ ಪೀಡಿತ ಮಹಿಳೆಯನ್ನು ಚಿಕಿತ್ಸೆಗಾಗಿ ಚಟ್ಟದ ಮೇಲೆ ಕರೆತಂದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದಲ್ಲಿ ನಡೆದಿದ್ದು, ಎದೆನೋವಿನಿಂದ ಬಳಲುತ್ತಿದ್ದ ಹರ್ಷದಾ ಘಾಡಿ(38) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

A sick woman from amagaon village belagavi died without a road to the village rav

ಬೆಳಗಾವಿ (ಜು.25): ಅನಾರೋಗ್ಯ ಪೀಡಿತ ಮಹಿಳೆಯನ್ನು ಚಿಕಿತ್ಸೆಗಾಗಿ ಚಟ್ಟದ ಮೇಲೆ ಕರೆತಂದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದಲ್ಲಿ ನಡೆದಿದ್ದು, ಎದೆನೋವಿನಿಂದ ಬಳಲುತ್ತಿದ್ದ ಹರ್ಷದಾ ಘಾಡಿ(38) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಎದೆನೋವಿನಿಂದ ಬಳಲುತ್ತಿದ್ದ ಮಹಿಳೆ. ಐದು ದಿನಗಳ ಹಿಂದೆ ಸುರಿಯುತ್ತಿರುವ ಭಾರೀ ಮಳೆಯಲ್ಲೇ ನಾಲ್ಕು ಕಿಮೀ ಮಹಿಳೆಯನ್ನ ಹೊತ್ತು ಕಾಲ್ನಡಿಗೆಯಲ್ಲೇ  ಆಸ್ಪತ್ರೆಗೆ ಕರೆತಂದಿದ್ದರು. ಇದಕ್ಕೂ ಮುನ್ನ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದ ಗ್ರಾಮಸ್ಥರು. ಆದರೆ ಗ್ರಾಮಕ್ಕೆ ಸಮರ್ಪಕ ರಸ್ತೆ ಇರದ ಹಿನ್ನೆಲೆ ಬರಲಾಗಿಲ್ಲ. ಹೀಗಾಗಿ ಕಾಲ್ನಡಿಗೆಯಲ್ಲಿ ಆನಾರೋಗ್ಯಪೀಡಿತ ಮಹಿಳೆಯನ್ನು ಚಟ್ಟದ ಮೇಲೆ ಹೊತ್ತು ಆಸ್ಪತ್ರೆಗೆ ಕರೆತಂದಿದ್ದರು.  ಬಳಿಕ ಗ್ರಾಮದ ಶಿಕ್ಷಕ ಆಂಬುಲೆನ್ಸ್ ಗೆ ಶಿಫ್ಟ್ ಮಾಡಿದ್ದ ಗ್ರಾಮಸ್ಥರು. 

ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಗೆ ಜಲಕಂಟಕ: ನದಿಗಳಲ್ಲಿ ಪ್ರವಾಹದ ಆತಂಕ

ಆಂಬುಲೆನ್ಸ್ ಮೂಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದಿರುವುದು, ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದಿರುವುದೇ ಮಹಿಳೆಯ ಸಾವಿಗೆ ಕಾರಣ. ರಸ್ತೆ ನಿರ್ಮಾಣಕ್ಕೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಕಾಲ್ನಡಿಗೆ ಮೂಲಕವೇ ಹರ್ಷದಾ ಶವ ಒಯ್ಯಬೇಕಾದ ಅನಿವಾರ್ಯತೆ ಕುಟುಂಬಸ್ಥರಿಗೆ ಬಂದಿದೆ.

Latest Videos
Follow Us:
Download App:
  • android
  • ios