Asianet Suvarna News Asianet Suvarna News

ಪೊಲೀಸ್ ಠಾಣೆಗೆ ಹೋದವನು ಹೆಣವಾಗಿ ಪತ್ತೆ: ಜಯನಗರ ಪೊಲೀಸರ ವಿರುದ್ಧ ಗಂಭೀರ ಆರೋಪ

ಪೊಲೀಸ್ ಠಾಣೆಗೆ ಹೋದವನು ಹೆಣವಾಗಿ ಪತ್ತೆಯಾದ ಘಟನೆ ಕಲ್ಪತರ ನಾಡು ತುಮಕೂರಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಹನುಮಂತರಾಯಪ್ಪ (58), ಶವವಾಗಿ ಪತ್ತೆಯಾದ ವ್ಯಕ್ತಿ.

He went to the police station and was found dead at tumakuru gvd
Author
First Published Dec 5, 2022, 1:30 AM IST

ತುಮಕೂರು (ಡಿ.05): ಪೊಲೀಸ್ ಠಾಣೆಗೆ ಹೋದವನು ಹೆಣವಾಗಿ ಪತ್ತೆಯಾದ ಘಟನೆ ಕಲ್ಪತರ ನಾಡು ತುಮಕೂರಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಹನುಮಂತರಾಯಪ್ಪ (58), ಶವವಾಗಿ ಪತ್ತೆಯಾದ ವ್ಯಕ್ತಿ. ತುಮಕೂರು ನಗರದ ಶೆಟ್ಟಿಹಳ್ಳಿ ಬಳಿಯ ನಾಯಕರಬೀದಿಯಲ್ಲಿ ಮೃತವ್ಯಕ್ತಿ ವಾಸವಿದ್ದರು. ಈ ಘಟನೆ ತುಮಕೂರು ಹೊರವಲಯದ ಶೆಟ್ಟಿಹಳ್ಳಿ ಬಳಿ ನಡೆದಿದೆ. ಹನುಮಂತರಾಯಪ್ಪ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸೈಕಲ್ ಕಳ್ಳತನ ವಿಚಾರಕ್ಕೆ ಈತನ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಹನುಮಂತರಾಯಪ್ಪನನ್ನು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಜಯನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ನಂತರ ಮಧ್ಯರಾತ್ರಿ 12.30ಕ್ಕೆ ಸುಮಾರಿಗೆ ಬಿಟ್ಟು ಕಳುಹಿಸಿದರು. ಇಂದು ಮತ್ತೆ ವಿಚಾರಣೆ ನೆಪದಲ್ಲಿ ಸಂಜೆ 5 ಗಂಟೆಗೆ ಬಲವಂತವಾಗಿ ಪೊಲೀಸ್ ಠಾಣೆಗೆ ಪೊಲೀಸರು ಕರೆದೊಯ್ದಿದ್ದರು ಎಂದು ಹೇಳಲಾಗುತ್ತಿದೆ. ಸಿವಿಲ್ ಡ್ರೆಸ್ ನಲ್ಲಿ ಒಬ್ಬ ಪೊಲೀಸ್ ಬಂದಿದ್ದು ಮತ್ತೊಬ್ಬರು ಯುನಿಫಾರ್ಮ್ ನಲ್ಲಿ ಬಂದಿದ್ದರು. ಇಬ್ಬರೂ ಸೇರಿಕೊಂಡು ಬೈಕ್​ನಲ್ಲಿ ಹನುಮಂತರಾಯಪ್ಪನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಂಜೆ 6:30ರ ವೇಳೆಗೆ ಪುನಃ ವಾಪಸ್ ಕರೆತಂದಿದ್ದಾರೆ. 

ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ

ಆದರೆ ಮನೆಗೆ ತಂದು ಬಿಡುವ ಬದಲು ಶೆಟ್ಟಿಹಳ್ಳಿ ರಿಂಗ್ ರೋಡ್ ಬಳಿ ಆತನನ್ನ ಬಿಟ್ಟು ಪರಾರಿ ಆಗಿದ್ದಾರೆ. ಮೃತ ವ್ಯಕ್ತಿಯ ಮೈದುನ ಕಾಣಿಸಿಕೊಂಡಿದ್ದಕ್ಕೆ ಪೊಲೀಸರು ರಸ್ತೆಬದಿಯೇ ಬಿಸಾಡಿ ಪರಾರಿ ಆಗಿದ್ದರು ಎನ್ನಲಾಗುತ್ತಿದೆ. ಈ ವೇಳೆ ಹನುಮಂತರಾಯಪ್ಪನ ಮೈದುನ ಪೊಲೀಸರನ್ನ ವಿಚಾರಿಸಿದ್ದಕ್ಕೆ ಯಾಕೋ ಸುಸ್ತಾಗಿದ್ದಾನೆ ಅಂತ ಸಬೂಬು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈಗ ಹನುಮಂತರಾಯಪ್ಪನನ್ನು ಪೊಲೀಸರೇ ಕಿರುಕುಳ ಕೊಟ್ಟು ಹಲ್ಲೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಲಾಗಿದೆ. ಅದಲ್ಲದೇ ಅನುಮಾನಾಸ್ಪದವಾಗಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈಗ ಜಯನಗರ ಪೊಲೀಸರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. 

Karwar: ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ

ಘಟನೆ ನಡೆದು ಮೂರು ಗಂಟೆ ಕಳೆದರೂ ಸ್ಥಳಕ್ಕೆ ಪೊಲೀಸರು ಬಂದಿಲ್ಲ. ಜಯನಗರ ಪೊಲೀಸ್ ಠಾಣೆಯಿಂದ ಈ ಸರ್ಕಲ್ ಕೂಗಳತೆ ದೂರದಲ್ಲಿದೆ. ಆದರೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿಲ್ಲ. 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ರು ಈ ಬಗ್ಗೆ ಸರಿಯಾಗಿ ಪೊಲೀಸರು ಸ್ಪಂದಿಸಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ಸ್ಥಳೀಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿಲ್ಲ. ಹೀಗಾಗಿ ಸ್ಥಳೀಯರ ಆಕ್ರೋಶ ಭುಗಿಲೆದ್ದಿದ್ದು ರಿಂಗ್ ರಸ್ತೆಯನ್ನೇ ತಡೆದು ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ. ಈಗ ನೂರಾರು ಜನರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios