Asianet Suvarna News Asianet Suvarna News

ಬರೋಬ್ಬರಿ 643 ಸಂಚಾರ ನಿಯಮ ಉಲ್ಲಂಘನೆ ಮಾಡಿರೋ ಭೂಪ; ಸ್ಕೂಟಿ ಬೆಲೆ 30 ಸಾವಿರ, ದಂಡ 3.22 ಲಕ್ಷ ರೂ!

643 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ.

A motorist who has violated traffic rules 643 times  searching for motorists by traffic police at bengaluru rav
Author
First Published Dec 19, 2023, 7:14 AM IST

ಬೆಂಗಳೂರು (ಡಿ.19): 643 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ.

ಹೌದು ಸ್ಕೂಟಿ ಪೆಪ್ ದ್ವಿಚಕ್ರವಾಹನವೊಂದು ಬರೊಬ್ಬರಿ 643 ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವಿತೌಟ್ ಹೆಲ್ಮೆಟ್, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 643 ಬಾರಿ ನಿಯಮಗಳ ಉಲ್ಲಂಘನೆ ಆಗಿದೆ. ಈ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ. 

ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದೆ. ಈ ಸ್ಕೂಟಿ ಮೂಲಕ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳ ಉಲ್ಲಂಘಿಸಲಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸ್ಕೂಟಿ ನಂಬರ್ KA 04, KF 9072 ಎಂದಾಗಿದೆ. ಬೆಂಗಳೂರಿನ ಆರ್‌ಟಿ ನಗರ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಟೂಟಿ ಮಾಲೀಕರು ಮತ್ತು ಸವಾರನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. 

ಮಧ್ಯರಾತ್ರಿ ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಭಾರೀ ಅಗ್ನಿ ಅವಘಡ; ಬೆಂಕಿಯ ಕೆನ್ನಾಲಗೆಗೆ ಬೆಚ್ಚಿಬಿದ್ದ ಬೆಂಗಳೂರು!

ಸ್ಕೂಟಿ ಬೆಲೆ 30 ಸಾವಿರ, ದಂಡ 3.22 ಲಕ್ಷ ರೂ

ಈ ಬಳಕೆ ಮಾಡಿದ ಸ್ಕೂಟಿಯ ಮಾರುಕಟ್ಟೆ ಅಂದಾಜು ಬೆಲೆ 20,000 ರಿಂದ 30,000 ರೂಪಾಯಿಗಳ ನಡುವೆ ಅಂದಾಜು ಮಾಡಲಾಗಿದೆ. ಪ್ರಸ್ತುತ, ಸಮಸ್ಯೆಯನ್ನು ಪರಿಹರಿಸಲು ಮತ್ತು ತಪ್ಪಿತಸ್ಥ ಸವಾರನನ್ನು ನ್ಯಾಯಕ್ಕೆ ತರಲು ಪೊಲೀಸರು ಸ್ಕೂಟಿಗಾಗಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ. 

ಸುದ್ದಿ ಹರಡುತ್ತಿದ್ದಂತೆ, ಟ್ರಾಫಿಕ್ ಕ್ಯಾಮೆರಾಗಳ ಕಾವಲು ಕಣ್ಣುಗಳನ್ನು ಕಡಿಮೆ ಅಂದಾಜು ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಸವಾರರಲ್ಲಿ ಜಾಗೃತಿಯ ಪ್ರಜ್ಞೆ ಹೆಚ್ಚುತ್ತಿದೆ. ನಿರಂತರವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಗಮನಾರ್ಹವಾದ ದಂಡ ಕಾಯುತ್ತಿರುತ್ತದೆ ಎಂಬುದಕ್ಕೆ ಈ ಪ್ರಕರಣ ಸ್ಪಶ್ಟ ಉದಾಹರಣೆಯಾಗಿದೆ.

ತಡರಾತ್ರಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಬೆಂಕಿ ಹೊತ್ತಿಕೊಂಡು ಬಟ್ಟೆ ಅಂಗಡಿ ಸುಟ್ಟು ಕರಕಲು!

ಮತ್ತೆ 4 ಸಂಚಾರ ನಿಯಮ ಉಲ್ಲಂಘನೆ, ಮತ್ತೆ 2 ಸಾವಿರ ರೂ ದಂಡ ಈ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆಯಾದರೂ ಅತ್ತ ಸ್ಕೂಟಿ ಸವಾರ ಮಾತ್ರ ಇದಾವುದರ ಪರಿವೇ ಇಲ್ಲದೇ ತನ್ನ ಸಂಚಾರ ನಿಯಮ ಉಲ್ಲಂಘನೆ ಚಾಳಿ ಮುಂದುವರೆಸಿದ್ದು ಇಂದೂ ಸಹ ನಾಲ್ಕು ಬಾರಿ ಹೆಲ್ಮೆಟ್ ರಹಿತ ಪ್ರಯಾಣ ಮಾಡಿರುವ ಕುರಿತು ಚಲನ್ ದಾಖಲಿಸಲಾಗಿದೆ. ಆ ಮೂಲಕ ಮತ್ತೆ 2 ಸಾವಿರ ರೂ ದಂಡ ಹೆಚ್ಚಿಸಿಕೊಂಡಿದ್ದು, ಈ ಮೂಲಕ ಆತ ಒಟ್ಟು 3.24 ಲಕ್ಷ ರೂ ದಂಡ ಪಾವತಿಸಬೇಕಿದೆ.

Follow Us:
Download App:
  • android
  • ios