ಮಧ್ಯರಾತ್ರಿ ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಭಾರೀ ಅಗ್ನಿ ಅವಘಡ; ಬೆಂಕಿಯ ಕೆನ್ನಾಲಗೆಗೆ ಬೆಚ್ಚಿಬಿದ್ದ ಬೆಂಗಳೂರು!
ನಗರದ ಮಾರತಹಳ್ಳಿ ಬ್ರಿಡ್ಜ್ ಸಮೀಪದ ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬಟ್ಟೆ ಬೆಂಕಿಗೆ ಆಹುತಿಯಾಗಿದೆ. ತಡರಾತ್ರಿ ನಡೆದಿರುವ ಬೆಂಕಿ ಅವಘಡದಲ್ಲಿ ಭಾರೀ ಅನಾಹುತವಾಗಿದ್ದು, ಘಟನೆಯಲ್ಲಿ ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಅಗ್ನಿ ಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬೆಂಗಳೂರು (ಡಿ.19): ನಗರದ ಮಾರತಹಳ್ಳಿ ಬ್ರಿಡ್ಜ್ ಸಮೀಪದ ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬಟ್ಟೆ ಬೆಂಕಿಗೆ ಆಹುತಿಯಾಗಿದೆ. ತಡರಾತ್ರಿ ನಡೆದಿರುವ ಬೆಂಕಿ ಅವಘಡದಲ್ಲಿ ಭಾರೀ ಅನಾಹುತವಾಗಿದ್ದು, ಘಟನೆಯಲ್ಲಿ ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಅಗ್ನಿ ಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬೆಂಕಿನ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ. ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ ರೂಂ. ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗೂ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಮೂರು ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಗೆ. ಬೆಂಕಿಯ ಕೆನ್ನಾಲಗೆಗೆ ವಾಹನ ಸವಾರರೇ ಬೆಚ್ಚಿಬಿದ್ದಿದ್ದಾರೆ. ಬಟ್ಟೆ ಶೋ ರೂಂನಿಂದ ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿ ಕಟ್ಟಡದ ಮುಂದಿದ್ದ ತೆಂಗಿನಮರ, ಟ್ರಾನ್ಸ್‌ಫಾರ್ಮರ್‌ಗೂ ತಗುಲಿ ಇನ್ನಷ್ಟೂ ಅನಾಹುತವಾಗಿದೆ.
ತಡರಾತ್ರಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಬೆಂಕಿ ಹೊತ್ತಿಕೊಂಡು ಬಟ್ಟೆ ಅಂಗಡಿ ಸುಟ್ಟು ಕರಕಲು!
ಬೆಂಕಿ ಹೊತ್ತಿಕೊಂಡಿದ್ದೇ ನಿಗೂಢ!
ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಹೇಗೆಂಬುದೇ ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇರುವ ಟ್ರಾನ್ಸ್‌ಫಾರ್ಮರ್. ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿಹೊತ್ತಿಕೊಂಡಿರು ಶಂಕೆ. ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿ ಬೋರ್ಡ್ ನಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ.
ನಾಲ್ವರು ಪ್ರಾಣಾಪಾಯದಿಂದ ಪಾರು:
ಬೆಂಕಿ ಅವಘಡ ಸಂಭವಿಸಿದ ವೇಳೆ ಕಟ್ಟಡದಲ್ಲಿದ್ದ ನಾಲ್ವರು ಉದ್ಯೋಗಿಗಳು. ಕಟ್ಟಡಕ್ಕೆ ಬೆಂಕಿ ಬಿದ್ದಾಗ ಹೊರಬರಲಾಗದೆ ಪರದಾಡಿದ್ದ ನಾಲ್ವರು. ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಟ್ಟಡದೊಳಗೆ ಜಂಪ್ ಮಾಡಿ ರೋಚಕವಾಗಿ ಪ್ರಾಣಾಪಾಯದಿಂದ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ಐದಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನ ಆಗಮಿಸಿ ಮಧ್ಯರಾತ್ರಿವರೆಗೆ ಕಾರ್ಯಾಚರಣೆ ನಡೆಸಿರೋ ಸಿಬ್ಬಂದಿ. ಮೊದಲು ಪಕ್ಕದ ಕಟ್ಟಡಕ್ಕೆ ಹೊತ್ತಿಕೊಳ್ತಿದ್ದ ಬೆಂಕಿ ಆರಿಸಿದ್ದಾರೆ. ಬಳಿಕ ಕಟ್ಟಡದ ಹೊರಗೆ ಉರಿಯುತ್ತಿದ್ದ ಬೆಂಕಿ ನಂದಿಸಿದ್ದಾರೆ. ಏಣಿ ಮೂಲಕ ಮೊದಲ ಮಹಡಿಗೆ ಹತ್ತಿರುವ ಸಿಬ್ಬಂದಿ. ಹೊಗೆ ಮಧ್ಯೆ ಬಿಎ(ಬ್ರೀತಿಂಗ್ ಅಪರೇಟಸ್) ಧರಿಸಿ ಕಟ್ಟಡದೊಳಗೆ ನುಗ್ಗಿ ಕಟ್ಟಡದ ತುದಿಯಲ್ಲಿ ಬೆಂಕಿ ಆರಿಸಿದ ಸಿಬ್ಬಂದಿ. ಈ ವೇಳೆ ಶೆಟರ್ ಕ್ಲೋಸ್ ಆಗಿದ್ದ ಶಾಪ್. ಕಟ್ಟರ್‌ನಿಂದ ಕಟ್ ಮಾಡಿ ಓಪನ್ ಮಾಡಿಕೊಂಡು ಜಾಗದ ಮೂಲದ ನೀರು ಹಾಯಿಸಿ ಬೆಂಕಿ ನಂದಿಸಿದ ಸಿಬ್ಬಂದಿ.
ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಂಗಡಿ ಮುಂದೆ ನಿಂತು ಬೆಂಕಿ ಆರಿಸಲು ಮುಂದಾದ ಸಿಬ್ಬಂದಿ. ಈ ವೇಳೆ ಮೊದಲ ಮಹಡಿಯಿಂದ ಗ್ಲಾಸ್ ಒಡೆದು ಮೇಲೆ ಬಿದ್ದು ಕೈಬೆರಳಿಗೆ ಗಾಯವಾಗಿದೆ. ಪಕ್ಕದಲ್ಲೇ ಇದ್ದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಸಿಬ್ಬಂದಿ. ಮಧ್ಯರಾತ್ರಿವರೆಗೆ ಎರಡೂವರೆ ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಅಂಗಡಿಯಲ್ಲಿದ್ದ ಎಲ್ಲ ಬಟ್ಟೆ ಸಂಪೂರ್ಣ ಸುಟ್ಟು ಕರಕಲು
ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ