Asianet Suvarna News Asianet Suvarna News

ತಡರಾತ್ರಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಬೆಂಕಿ ಹೊತ್ತಿಕೊಂಡು ಬಟ್ಟೆ ಅಂಗಡಿ ಸುಟ್ಟು ಕರಕಲು!

ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆ ಸಿಗ್ನಲ್‌ ಬಳಿಯ ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

Fire accident again in  a clothes shop in sampige road malleshwaram at bengaluru rav
Author
First Published Dec 19, 2023, 6:10 AM IST

ಬೆಂಗಳೂರು (ಡಿ.19): ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆ ಸಿಗ್ನಲ್‌ ಬಳಿಯ ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಮಲ್ಲೇಶ್ವರಂನ 8ನೇ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿ. ಎಲೆಕ್ಟ್ರಿಕ್‌ ಪರಿಕರಗಳಿಂದ ಬೆಂಕಿ ಹೊತ್ತಿಕೊಂಡು ಉರಿದಿರೋ ಬಟ್ಟೆ ಅಂಗಡಿ. ಬೆಂಕಿ ಸಂಪೂರ್ಣ ನಂದಿಸಿದ ಅಗ್ನಿಶಾಮಕ‌ ಸಿಬ್ಬಂದಿ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೊಂಬತ್ತಿ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿಗೆ ಬೆಂಕಿ; ಚಿಕಿತ್ಸೆ ಫಲಕಾರಿಯಾಗದೇ ಸಾವು

ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಕ್ಲೋಸ್ ಮಾಡಿಕೊಂಡು ಮನೆಗೆ ತೆರಳಿದ್ದ ಮಾಲೀಕರು. ಅಂಗಡಿ ಕ್ಲೋಸ್ ಮಾಡುವಾಗ ಕಂಪ್ಯೂಟರ್ ಆನ್‌ ಮಾಡಿ ಹಾಗೆ ಹೋಗಿದ್ದ ಮಾಲೀಕರು. ಮೊದಲಿಗೆ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡಿದೆ. ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಸಮೀಪದ ಬಟ್ಟೆಗೆ ತಗುಲಿ ಇಡೀ ಬಟ್ಟೆ ಅಂಗಡಿಯಲ್ಲಿದ್ದ ಎಲ್ಲ ಬಟ್ಟೆಗೆ ಬೆಂಕಿ ಹೊತ್ತಿಕಕೊಂಡು ಉರಿದಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

ದರೋಡೆ ವೇಳೆ ಎಟಿಎಂಗೆ ಬೆಂಕಿ, ₹4.5 ಲಕ್ಷ ರು. ಭಸ್ಮ!

ಸಾಲು ಸಾಲು ಬೆಂಕಿ ಅವಘಡ:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ನಗರ ಕಾರ್ಖಾನೆ, ಮಳಿಗೆ, ಬಟ್ಟೆ ಅಂಗಡಿ ದಿನನಿತ್ಯ ಒಂದಲ್ಲೊಂದು ಬೆಂಕಿ ಅವಘಡದಂತಹ ಘಟನೆ ಮರುಕಳಿಸುತ್ತಲೇ ಇದೆ.  ಕೊನೆ ಇಲ್ಲ ಎಂಬಂತಾಗಿದೆ.

Follow Us:
Download App:
  • android
  • ios