Asianet Suvarna News Asianet Suvarna News

ಪಾಳುಬಿದ್ದ ಮನೆಗೆ ಕರೆದೊಯ್ದು ಪರಿಚಿತ ಮಹಿಳೆ ಮೇಲೆಯೇ ಅತ್ಯಾಚಾರ; ಪರಾರಿಯಾಗಿದ್ದ ಕಾಮುಕ ಅರೆಸ್ಟ್

ಪರಿಚಿತ ವಿವಾಹಿತ ಮಹಿಳೆಯನ್ನ ಪುಸಲಾಯಿಸಿ ನಗರದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿದ ಘಟನೆ ಯಾದಗಿರಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

A married woman raped by his friend this incident happened in yadgir district rav
Author
First Published Aug 18, 2024, 11:43 PM IST | Last Updated Aug 18, 2024, 11:43 PM IST

ಯಾದಗಿರಿ (ಆ.18): ಪರಿಚಿತ ವಿವಾಹಿತ ಮಹಿಳೆಯನ್ನ ಪುಸಲಾಯಿಸಿ ನಗರದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿದ ಘಟನೆ ಯಾದಗಿರಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೇಮಂತ್, ಅತ್ಯಾಚಾರವೆಸಗಿದ ಆರೋಪಿ.  ಸಂತ್ರಸ್ತೆ ಮಹಿಳೆ ಯಾದಗಿರಿ ನಿವಾಸಿಯಾಗಿದ್ದು ಆರೋಪಿಗೆ ಪರಿಚಿತಳಾಗಿದ್ದಾಳೆ. ಪರಿಚಯ ಹಿನ್ನೆಲೆ ಯಾವುದೋ ನೆಪದಲ್ಲಿ ನಗರದ ಹೊರಭಾಗಕ್ಕೆ ಕರೆದೊಯ್ದಿದ್ದ ಆರೋಪಿ. ಪಾಳುಬಿದ್ದ ಮನೆಯಲ್ಲಿ  ಮಹಿಳೆಯ ಮೇಲೆರಗಿ ಅತ್ಯಾಚಾರ ನಡೆಸಿರುವ ದುರುಳ. ಬಳಿಕ  ಮಹಿಳೆಯ ಕಿರುಚಾಟಕ್ಕೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕಾಮುಕನ ಅಟ್ಟಹಾಸಕ್ಕೆ ನಿನ್ನೆ ರಾತ್ರಿಯಿಂದ ನಿತ್ರಾಣಗೊಂಡು ಪಾಳುಮನೆಯಲ್ಲಿ ಬಿದ್ದ ಮಹಿಳೆ. ಮಹಿಳೆ ನರಳಾಡುತ್ತಿರುವುದ ಸ್ಥಳೀಯರ ಗಮನಕ್ಕೆ ಬಂದಿದೆ. ಪಾಳುಬಿದ್ದ ಮನೆಯೊಳಗೆ ನೋಡಿದಾಗ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿದ್ಯಾರ್ಥಿನಿ ರೇಪ್ ಕೇಸ್‌ಗೆ ಟ್ವಿಸ್ಟ್; ಬೈಕ್‌ನಲ್ಲಿ ಡ್ರಾಪ್ ಕೊಡೋದಾಗಿ ಶೆಡ್‌ಗೆ ಕರೆದೊಯ್ದ ಕಾಮುಕ

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಂತ್ರಸ್ತೆ ಮಹಿಳೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಂತ್ರಸ್ತೆ ಮಹಿಳೆ ಹೇಳಿಕೆ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಕಾಮುಕ ಆರೋಪಿ ಹೇಮಂತ್ ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಅತ್ಯಾಚಾರ ಘಟನೆ ಸಂಬಂಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
 

Latest Videos
Follow Us:
Download App:
  • android
  • ios