Asianet Suvarna News Asianet Suvarna News

UP Crime: ಮಾಜಿ ಪ್ರೇಯಸಿಯ 6 ತುಂಡಾಗಿ ಕತ್ತರಿಸಿದ ಪಾಪಿ!

  • ಮಾಜಿ ಪ್ರೇಯಸಿಯ 6 ತುಂಡಾಗಿ ಕತ್ತರಿಸಿದ!
  • ಶ್ರದ್ಧಾ ಹತ್ಯೆ ಬೆನ್ನಲ್ಲೇ ಮತ್ತೊಂದು ಹೇಯ ಕೃತ್ಯ ಬೆಳಕಿಗೆ
  • ಪ್ರೀತಿಸಿದವಳು ಬೇರೆಯವನ ಮದುವೆಯಾಗಿದ್ದಕ್ಕೆ ಹಲ್ಲೆ
  •  ಪ್ರೇಯಸಿಯ 6 ತುಂಡಾಗಿ ಕತ್ತರಿಸಿ ಬಾವಿಯಲ್ಲಿ ಎಸೆದ ಭಗ್ನಪ್ರೇಮಿ
  • ಪೊಲೀಸರ ಮೇಲೂ ಗುಂಡು ಹಾರಿಸಿ ಪರಾರಿಯಾಗಲು ಯತ್ನ
A man who killed ex girlfriend and cut her body into 6 parts at up rav
Author
First Published Nov 22, 2022, 1:15 AM IST

ಆಜಂಘರ್‌ (ನ.22): ದೆಹಲಿಯ ‘35 ಪೀಸ್‌ ಮರ್ಡರ್‌’ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಮಾಜಿ ಪ್ರೇಯಸಿಯನ್ನು 6 ತುಂಡುಗಳಾಗಿ ಕತ್ತರಿಸಿ ಬಾವಿಗೆಸೆದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಎನ್‌ಕೌಂಟರ್‌ ನಡೆಸಿ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪ್ರಿನ್ಸ್‌ ಯಾದವ್‌ ಎಂದು ಗುರುತಿಸಲಾಗಿದೆ. ನ.15ರಂದು ಪಶ್ಚಿಮಿ ಗ್ರಾಮದ ಹೊರಭಾಗದಲ್ಲಿರುವ ಬಾವಿಯಲ್ಲಿ ಯುವತಿಯೊಬ್ಬಳ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಮೃತ ಮಹಿಳೆಯನ್ನು ಆಜಂಗಢ ಜಿಲ್ಲೆಯ ಇಷಕ್‌ಪುರ್‌ ಗ್ರಾಮದ ಆರಾಧನಾ ಎಂದು ಗುರುತಿಸಲಾಗಿದ್ದು, ದೇಹ ಅರೆನಗ್ನ ಅವಸ್ಥೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಆರಾಧನಾಳನ್ನು ಪ್ರಿನ್ಸ್‌ ಪ್ರೀತಿಸಿದ್ದ. ಆದರೆ ಆಕೆ ಇನ್ನೋರ್ವನ ಜತೆ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಎಂದು ತಿಳಿದು ಬಂದಿದೆ.

ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!

ಹೀಗಾಗಿ ಸೇಡಿಗಾಗಿ ಪ್ರಿನ್ಸ್‌ ತನ್ನ ಪಾಲಕರು, ಸಹೋದರ ಸರ್ವೇಶ್‌ ಜತೆ ಸೇರಿ ಆರಾಧನಾಳ ಹತ್ಯೆಗೆ ಸಂಚು ಹೂಡಿದ್ದ. ಕಬ್ಬಿನ ಗದ್ದೆಯಲ್ಲಿ ಸಹೋದರ ಸರ್ವೇಶ್‌ ಸಹಾಯದಿಂದ ಆರಾಧನಾಳ ಕತ್ತು ಹಿಸುಕಿ ಸಾಯಿಸಿದ್ದು, ಅವರ ದೇಹವನ್ನು 6 ಭಾಗಗಳಾಗಿ ಕತ್ತರಿಸಿ ಪಾಲಿಥೀನ್‌ ಬ್ಯಾಗ್‌ನಲ್ಲಿ ಸುತ್ತಿ ಸಮೀಪದ ಬಾವಿಗೆ ಎಸೆದಿದ್ದ. ಅಲ್ಲದೇ ಆಕೆಯ ತಲೆಯ ಭಾಗವನ್ನು ಸ್ವಲ್ಪ ದೂರದಲ್ಲಿರುವ ಕೆರೆಯಲ್ಲಿ ಎಸೆದಿದ್ದ.

ಪೊಲೀಸರು ಪ್ರಿನ್ಸ್‌ನನ್ನು ಬಂಧಿಸಿ ಆರಾಧನಾಳ ತಲೆಯ ಭಾಗವನ್ನು ಹುಡುಕಲು ಕರೆದುಕೊಂಡು ಹೋದಾಗ ಈತ ಅಡಗಿಸಿಟ್ಟದೇಸಿ ಬಂದೂಕಿನಿಂದ ಪೊಲೀಸರ ಮೇಲೆ ಗುಯಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರು ಎನ್‌ಕೌಂಟರ್‌ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ದೇಸಿ ಬಂದೂಕು, ದೇಹ ತುಂಡಿಸಲು ಬಳಸಿದ ಹರಿತವಾದ ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರದ್ಧಾ ಹತ್ಯೆ ಪ್ರಕರಣ: ತಲೆಬುರಡೆ ಸಿಗದಿದ್ದರೆ ಅಫ್ತಾಬ್‌ಗೆ ಗಲ್ಲು ಶಿಕ್ಷೆ ಆಗಲ್ವಾ?

Follow Us:
Download App:
  • android
  • ios