ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ: ಆತಂಕದಲ್ಲಿ ಕುಟುಂಬಸ್ಥರು
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕಾರ್ಯಕ್ರಮದ ಬಳಿಕ 25 ದಿನಗಳು ಕಳೆದರೂ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಆತಂಕದಲ್ಲಿದ್ದು, ಬಾಗಲಕೋಟೆ ಜಿಲ್ಲೆಯ ಅಡಿಹುಡಿ ಗ್ರಾಮದ ಗಿರಿಮಲ್ಲ ರಾಮದಾಸ್ ಕಂಡೇಕರ್ (36) ಕಾಣೆಯಾಗಿರುವ ವ್ಯಕ್ತಿ.
ಬಾಗಲಕೋಟೆ (ಆ.28): ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕಾರ್ಯಕ್ರಮದ ಬಳಿಕ 25 ದಿನಗಳು ಕಳೆದರೂ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಆತಂಕದಲ್ಲಿದ್ದು, ಬಾಗಲಕೋಟೆ ಜಿಲ್ಲೆಯ ಅಡಿಹುಡಿ ಗ್ರಾಮದ ಗಿರಿಮಲ್ಲ ರಾಮದಾಸ್ ಕಂಡೇಕರ್ (36) ಕಾಣೆಯಾಗಿರುವ ವ್ಯಕ್ತಿ. ಗಿರಿಮಲ್ಲ ಕಾಂಗ್ರೆಸ್ ಕಾರ್ಯಕರ್ತ, ಸಿದ್ದರಾಮಯ್ಯ ಅವರ ಅಭಿಮಾನಿ. ಆ.2ರಂದು ಅಡಿಹುಡಿಯಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದರು.
ದಾವಣಗೆರೆಯಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಬಸ್ ಮೂಲಕ ಹೋಗಿದ್ದರು. ಆದರೆ ಕಾರ್ಯಕ್ರಮದ ವೇಳೆ ಕಾಣೆಯಾದ ಗಿರಿಮಲ್ಲ ವಾಪಸ್ ಸಿಕ್ಕಿಲ್ಲ. ಕಳೆದ 25 ದಿನಗಳಿಂದ ಅವರ ಕುಟುಂಬವು ಹುಡುಕಾಟ ನಡೆಸುತ್ತಿದ್ದಾರೆ. ಇವರಿಗೆ ಪತ್ನಿ, ತಾಯಿ ಹಾಗೂ ಮೂವರು ಮಕ್ಕಳಿದ್ದಾರೆ. ಸಾವಳಗಿ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು: ಸಚಿವ ಮಾಧುಸ್ವಾಮಿ
ಸಿದ್ದರಾಮೋತ್ಸವಕ್ಕೆ ತೆರಳಿದ್ದ ವೃದ್ಧ ಶವವಾಗಿ ಪತ್ತೆ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ತೆರಳಿದ್ದ ವೃದ್ಧರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ವೃದ್ಧ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ. ತಾಲೂಕಿನ ಅರಳುಕುಪ್ಪೆ ಗ್ರಾಮದ ಸ್ವಾಮಿಗೌಡ (72) ಮೃತ ವೃದ್ಧ. ಆ.2ರಂದು ಸ್ವಾಮಿಗೌಡ ಸೇರಿದಂತೆ ಹಲವರು ದಾವಣಗೆರೆಯಲ್ಲಿ ಏರ್ಪಡಿಸಿದ್ದ ಸಿದ್ದರಾಮಯ್ಯ-75 ಅಮೃತ ಮಹೋತ್ಸವಕ್ಕೆ ತೆರಳಿದ್ದರು. ಆ.3ರಂದು ದಾವಣಗೆರೆ ಸಮಾವೇಶ ಸ್ಥಳದಲ್ಲಿ ಸ್ವಾಮಿಗೌಡ ನಾಪತ್ತೆಯಾಗಿದ್ದರು. ಅಂದೇ ದಾವಣಗೆರೆಯಲ್ಲಿ ಶವವಾಗಿ ಸ್ವಾಮಿಗೌಡ ಪತ್ತೆಯಾಗಿದ್ದರೂ ಕುಟುಂಬಸ್ಥರಿಗೆ ವಿಷಯ ತಿಳಿದಿರಲಿಲ್ಲ.
ಸಿದ್ದರಾಮೋತ್ಸವ ಮುಗಿದರೂ ಊರಿಗೆ ಸ್ವಾಮಿಗೌಡ ಬಾರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ದೂರು ನೀಡಿದ್ದರು. ಈ ಸಂಬಂಧ ದಾವಣಗೆರೆ ಪೊಲೀಸರನ್ನು ಸಂಪರ್ಕಿಸಿದಾಗ ಶವದ ಗುರುತು ಪತ್ತೆಯಾಯಿತು. ವಿಷಯ ತಿಳಿದು ಕುಟುಂಬದವರು ದಾವಣಗೆರೆಗೆ ದೌಡಾಯಿಸಿದ್ದಾರೆ. ದಾವಣಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಪೊಲೀಸರು ವಾರಸುದಾರರಿಗೆ ನೀಡಿದ್ದಾರೆ.ಸ್ವಾಮಿಗೌಡ ಪುತ್ರ ಮಂಜುನಾಥ್ ಕನ್ನಡಪ್ರಭ ಸಂಪರ್ಕಿಸಿದಾಗ, ಸ್ವಾಮಿಗೌಡ ಅವರು ಸ್ನೇಹಿತರೊಂದಿಗೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುವ ವೇಳೆ ಮೂತ್ರವಿಸರ್ಜನೆಗೆಂದು ಕೆಳಗಿಳಿದಿದ್ದಾರೆ.
ದಾರಿ ಬಿಡುವ ವಿಚಾರಕ್ಕೆ ಕಿರಿಕ್: ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ
ವಾಹನ ಒತ್ತಡವಿದ್ದ ಕಾರಣ ಪೊಲೀಸರು ಎಲ್ಲಾ ವಾಹನಗಳನ್ನು ಮುಂದೆ ಸಾಗುವಂತೆ ಮಾಡಿದ ಸಂದರ್ಭದಲ್ಲಿ ಸ್ವಾಮಿಗೌಡ ಅವರು ನಾಪತ್ತೆಯಾದರು. ಈ ಸಮಯದಲ್ಲಿ ಸ್ವಾಮಿಗೌಡ ಮತ್ತು ಕಾರ್ಯಕ್ರಮಕ್ಕೆ ಬಂದಿದ್ದ ಮತ್ತೋರ್ವರು ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿರುವುದಾಗಿ ಹೇಳಿದರು.