ನಗರಸಭೆ ಮಳಿಗೆ ಖಾಲಿ ಮಾಡಿಸಲು ಹೋದ ಸಿಬ್ಬಂದಿಗೆ ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ರಾಯಚೂರು ನಗರದ ಮಹಿಳಾ ಸಮಾಜದ ಬಳಿ ನಡೆದಿದೆ.

ರಾಯಚೂರು (ಫೆ.23): ನಗರಸಭೆ ಮಳಿಗೆ ಖಾಲಿ ಮಾಡಿಸಲು ಹೋದ ಸಿಬ್ಬಂದಿಗೆ ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ರಾಯಚೂರು ನಗರದ ಮಹಿಳಾ ಸಮಾಜದ ಬಳಿ ನಡೆದಿದೆ.

 ಅನಧಿಕೃತವಾಗಿ ಮಳಿಗೆಯಲ್ಲಿ ಇರುವ ವ್ಯಾಪಾರಿಗಳು. ಯಾವುದೇ ತೆರಿಗೆ, ಬಾಡಿಗೆ ಕೊಡದೇ ವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳು. ಇವರಿಗೆ ಕಳೆದ ಏಪ್ರಿಲ್ ತಿಂಗಳಲ್ಲೇ ಮಳಿಗೆ ಖಾಲಿ ಮಾಡುವಂತೆ ನಗರಸಭೆ ಸಿಬ್ಬಂದಿ ನೋಟಿಸ್ ನೀಡಿದ್ದರು. ನೋಟಿಸ್ ಕೊಟ್ಟರೂ ಕ್ಯಾರೇ ಎನ್ನದೇ ಎಂದಿನಂತ ವ್ಯಾಪಾರ ವಹಿವಾಟು ಮುಂದುವರಿಸಿದ್ದರು. ನೋಟಿಸ್ ಅವಧಿ ಮುಗಿದಿರೋದ್ರಿಂದ ಇಂದು ನಗರಸಭೆ ಸಿಬ್ಬಂದಿ ಮಳಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ರು. ಈ ವೇಳೆ ಮಳಿಗೆ ಖಾಲಿ ಮಾಡಿ ಎಂದಿದ್ದಕ್ಕೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿರುವ ವ್ಯಾಪಾರಿಗಳು.

ಶಕ್ತಿ ಯೋಜನೆ ಅವಾಂತರ: ಫ್ರೀ ಬಸ್ ಹತ್ತಿ ನಾಪತ್ತೆಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ!

ನಗರಸಭೆ ಮಳಿಗೆಯಲ್ಲಿ ಅನಧಿಕೃತವಾಗಿ ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ. ತೆರವುಗೊಳಿಸಲು ಸಿಬ್ಬಂದಿ ಹೋದಾಗ ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿರುವ ವ್ಯಾಪಾರಿ. ಮಚ್ಚು ಕೆಳಗಿಡಲು ಹೇಳಿದ್ರೂ ಕೇಳದೇ ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿರುವ ವ್ಯಾಪಾರಿ. ತೆರವುಗೊಳಿಸಿದರೆ ಮಚ್ಚಿನೇಟು ಎಂಬಂತೆ ಬೆದರಿಕೆ ಹಾಕಲಾಗಿದೆ. ನಗರದ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ.