ವ್ಯಕ್ತಿಯೋರ್ವ ಕೋಪದ ಭರದಲ್ಲಿ ತನ್ನ ಮಗನನ್ನೇ ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ನಡೆದಿದೆ. ಕರೆಕಲ್ಮನೆ ನಿವಾಸಿ 32 ವರ್ಷದ ನರ್ತನ್ ಬೋಪಣ್ಣ ಮೃತ ದುರ್ದೈವಿ.

ಬೆಂಗಳೂರು (ಜ.26): ವ್ಯಕ್ತಿಯೋರ್ವ ಕೋಪದ ಭರದಲ್ಲಿ ತನ್ನ ಮಗನನ್ನೇ ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಕರೆಕಲ್ಮನೆ ನಿವಾಸಿ 32 ವರ್ಷದ ನರ್ತನ್ ಬೋಪಣ್ಣ ಮೃತ ದುರ್ದೈವಿ.

ಯಾವುದೋ ವಿಚಾರಕ್ಕೆ ನರ್ತನ್ ಹಾಗೂ ತಂದೆ ಸುರೇಶ್ ನಡುವೆ ಜಗಳ ಉಂಟಾಗಿದೆ. ಈ ಜಗಳದಲ್ಲಿ ಮಾತಿಗೆ ಮಾತು ಬೆಳೆದು ಮತ್ತಷ್ಟು ಕೋಪಗೊಂಡಿರುವ ತಂದೆ ಮಗನಿಗೆ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದಿರುವ ನರ್ತನ್. ಗುಂಡಿನ ಶಬ್ದಕ್ಕೆ ಬೆಚ್ಚಿಬಿದ್ದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ದಾವಣಗೆರೆ: ಗಣರಾಜ್ಯೋತ್ಸವ ದಿನವೇ ಆತಂಕ ಸೃಷ್ಟಿಸಿದ ಸೂಟ್‌ಕೇಸ್!

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು. ಆ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ನರ್ತನ್. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ನರ್ತನ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಸುರೇಶನನ್ನು ವಶಕ್ಕೆ ಪಡೆದ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.