* 2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ದೊಡ್ಡಪ್ಪ!* ಚಾಕ್ಲೇಟ್ ಆಸೆ ತೋರಿಸಿ ಕೃತ್ಯ* ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸೈಯದ್ ವಾಡಿಯಲ್ಲಿ ನಡೆದ ಘಟನೆ

ರಾಮನಗರ, (ಜೂನ್.03): 2 ವರ್ಷದ ಮಗು ಮೇಲೆ ಸ್ವಂತ ದೊಡ್ಡಪ್ಪನೇ ಅತ್ಯಾಚಾರ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸೈಯದ್ ವಾಡಿಯಲ್ಲಿ ನಡೆದಿದೆ. 

ಸೈಯದ್ ವಾಡಿಯ ಮುಸ್ತಾನ ಹಾಗೂ ಮೊಹಮ್ಮದ್ ಇರ್ಫಾನ್ ದಂಪತಿಯ 2 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಮಾಡಲಾಗಿದೆ. ಗುರುವಾರ ರಾತ್ರಿ ಈ ನೀಚಾ ಕೃತ್ಯ ನಡೆದಿದೆ. ಸಾದಿರ್ (28) ಅತ್ಯಾಚಾರವೆಸಗಿರುವವ.

ಬಾಯಿಗೆ ಬಟ್ಟೆ ತುರುಕಿ ಅಂಗವಿಕಲೆ ಮೇಲೆ ಅತ್ಯಾಚಾರ

 ಮುಸ್ತಾನ ಸಹೋದರಿ ಪತಿ ಸಾದಿರ್ ಆಗಿದ್ದು ಈತ ಕೂಡ ಸೈಯದ್ ವಾಡಿಯಲ್ಲಿ ವಾಸವಿದ್ದ. ನಿನ್ನೆ(ಗುರುವಾರ) ಮಧ್ಯಾಹ್ನ ಚಾಕ್ ಲೇಟ್ ಕೊಡಿಸುವುದಾಗಿ ಮನೆಯಿಂದ ಸಾದಿರ್ ತನ್ನ ಮನೆಗೆ ಮಗುವನ್ನ ಕರೆದುಕೊಂಡು ಹೋಗಿದ್ದ . ತಡರಾತ್ರಿ ಆದ್ರೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿರಲಿಲ್ಲಾ, ಹಾಗಾಗಿ ಮಗುವನ್ನು ಮನೆಗೆ ಕರೆದುಕೊಂಡು ಬರುವಂತೆ ಮಗುವಿನ ಪೋಷಕರು ಹೇಳಿದ್ರು. ರಾತ್ರಿ 12 ಗಂಟೆ ಸುಮಾರಿಗೆ ಮುಸ್ತಾನ ಮನೆಗೆ ಸಾದಿರ್ ಮಗುವನ್ನ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದ. 

ಈ ವೇಳೆ ಮಗುವಿನ ಕಾಲಿನಲ್ಲಿ ರಕ್ತದ ಕಲೆ, ಗಾಯಗಳನ್ನು ಕಂಡು ಪೋಷಕರು ಗಾಬರಿಯಾಗಿದ್ರು. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಫೊಷಕರು ಕರೆದುಕೊಂಡು ಬಂದಿದ್ರು , ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಬಾಲಕಿ ತಾಯಿ ಮಾತನಾಡಿ, ನನ್ನ ಮಗಳನ್ನ ಚಾಕ್ಲೇಟ್ ಕೊಡಿಸುತ್ತೇನೆಂದು ಕರೆದುಕೊಂಡು ಹೋದರು. ನಮ್ಮ ಬಾವನೆ ಈ ಕೆಲಸ ಮಾಡಿದ್ದಾರೆ. ನಮಗೆ ಬಹಳ ನೋವಾಗ್ತಿದೆ ಎಂದು ಕಣ್ಣೀರಿಟ್ಟಿದ್ದಾಳೆ.