ಕೋಲಾರ, (ಮೇ.06): ಎಣ್ಣೆ ಮತ್ತಲ್ಲಿ  ಮತ್ತಿನಲ್ಲಿ ಅಡ್ಡ ಬಂದ ಹಾವನ್ನೇ ಹಿಡಿದು ಕಚ್ಚಿ ತಿಂದು ತೇಗಿದ್ದ ಆಸಾಮಿ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

ಹೌದು...ಮೇ.4ರಂದು ರಾಜ್ಯದಲ್ಲಿ ಬಾರ್ ಓಪನ್ ಆಗುತ್ತಿದ್ದಂತೆ, ಎಣ್ಣೆಕಿಕ್‌ನಲ್ಲಿ ಹಾವನ್ನೇ ಕಚ್ಚಿ ಕಚ್ಚಿ ತಿಂದಿದ್ದ ಸತೀಶ್ ಕುಮಾರ್  ಎಂಬಾತನನ್ನು ಇಂದು (ಬುಧವಾರ) ಕೋಲಾರ ಜಿಲ್ಲಾ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

. ಕೋಲಾರದ ಕುಡುಕನ 'ಗುಂಡಿ'ಗೆ, ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿಂದ!

ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಸತೀಶ್ ಕುಮಾರ್ ಎನ್ನುವಾತ ಕುಡಿದು ಗಾಡಿಯಲ್ಲಿ ಹೋಗುತ್ತಿದ್ದಾಗ ಹಾವು  ಅಡ್ಡ ಬಂದಿದೆ.  ದಾರಿಯಲ್ಲಿ ನಿಲ್ಲಿಸಿಕೊಂಡು ಹಾವನ್ನು ಕೈಗೆ ಎತ್ತಿಕೊಂಡ ಭೂಪ ಕಚ್ಚಿ ಕಚ್ಚಿ ಸಾಯಿಸಿದ್ದ.

ಈ ದೃಶ್ಯವನ್ನು ಸ್ಥಳದಲ್ಲಿದ್ದಂತ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಆ ನಂತ್ರ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಸಂಬಂಧ  ಮುಳುಬಾಗಿಲು ಅರಣ್ಯಾಧಿಕಾರಿಗಳು ಸ್ವಯಂ ಪ್ರಕರಣ ದಾಖಲಸಿಕೊಂಡಿದ್ದರು.

ವೀಡಿಯೋ ವೈರಲ್ ಕೂಡ ವೈರಲ್ ಆಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಆರೋಪಿ ಎಂ ವಿ ಸತೀಶ್ ಕುಮಾರ್  ಬಂಧನಕ್ಕೆ ಬಲೆ ಬೀಸಿದ್ದು, ಕೊನೆಗೆ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

"