Asianet Suvarna News Asianet Suvarna News

ಬಾಲಕಿಯ ಮೇಲೆ ಕಣ್ಣು ಹಾಕಿದ ಕಾಮುಕನಿಗೆ ಗೂಸಾ

ಐದು ವರ್ಷದ ಬಾಲಕಿಯ ಮೇಲೆ 45 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಲ್ಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಮಾರ್ ಜಾಧವ್ ಎನ್ನುವ 45 ವರ್ಷದ ವ್ಯಕ್ತಿಯಿಂದ ಈ ಹೀನ ಕೃತ್ಯ ನಡೆದಿದ್ದು, ಜನರೇ ಹಿಡಿದು ಈತನನ್ನು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 

A lover who laid eyes on a girl was hit
Author
First Published Nov 26, 2022, 5:51 PM IST

ಕಲಬುರಗಿ (ನ.26): ಐದು ವರ್ಷದ ಬಾಲಕಿಯ ಮೇಲೆ 45 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಲ್ಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಮಾರ್ ಜಾಧವ್ ಎನ್ನುವ 45 ವರ್ಷದ ವ್ಯಕ್ತಿಯಿಂದ ಈ ಹೀನ ಕೃತ್ಯ ನಡೆದಿದ್ದು, ಜನರೇ ಹಿಡಿದು ಈತನನ್ನು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 

ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಂಡಾವೊಂದರಲ್ಲಿ ಐದು ವರ್ಷದ ಬಾಲಕಿ, ತನ್ನ ಮನೆಯ ಹೊರಗಡೆ ಆಟವಾಡುತ್ತಾ ನಿಂತಿದ್ದಳು. ಅದೇ ಗ್ರಾಮದ 45 ವರ್ಷದ ವ್ಯಕ್ತಿ, ಚಾಕ್ಲೆಟ್ ಕೊಟ್ಟು ಆ ಬಾಲಕಿಯನ್ನು ಪಕ್ಕದಲ್ಲಿಯೇ ಇರುವ ತೊಗರಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದರಿಂದ ಆತಂಕ್ಕೊಳಗಾದ ಬಾಲಕಿ ಕಿರುಚಾಡಲು ಶುರು ಮಾಡಿದ್ದಾಳೆ. ಒಂದಿಷ್ಟು ದೂರದಲ್ಲಿ ಅದೇ ತೊಗರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಬಾಲಕಿಯ ಅಳು, ಚೀರಾಟ, ಕೂಗಾಟ ಕೇಳಿಸಿದೆ. ತಕ್ಷಣವೇ ಅವರು ಸ್ಥಳಕ್ಕೆ ಬಂದು ನೋಡಿದಾಗ, ಈ ಕಾಮುಕನ ಕೃತ್ಯ ಬಟಾ ಬಯಲಾಗಿದೆ. 

ಪಂಜಾಬ್‌ನಲ್ಲಿ ನಾಲ್ವರು ಕಾಮುಕಿಯರಿಂದ ಪುರುಷನ ಮೇಲೆ ಅತ್ಯಾಚಾರ..!

ಜನರಿಂದಲೇ ಬಿತ್ತು ಗೂಸಾ: ಕೇವಲ ಐದು ವರ್ಷದ ಪುಟ್ಟ ಬಾಲಕಿಯ ಸ್ಥಿತಿಯನ್ನು ಕಣ್ಣಾರೆ ಕಂಡ ಜನ ರೊಚ್ಚಿಗೆದ್ದು ಈ ಕಾಮುಕನಿಗೆ ಮನ ಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಹಿಡಿದುಕೊಂಡು ಸ್ತಳೀಯ ವಾಡಿ ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ವಾಡಿ ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದಾಳೆ. ಫೋಕ್ಸೋ ಅಡಿ ದೂರು ದಾಖಲಿಸಿಕೊಂಡಿರುವ ವಾಡಿ ಪೊಲೀಸರು ಆರೋಪಿಯನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. 

ವಿವಾಹಿತ ಆದ್ರೆ ಹೆಂಡತಿ ದೂರ: ಈ ವಿಕೃತ ಕಾಮುಕ ಕುಮಾರ್ ಜಾದವ್ ಸಂತೃಸ್ಥ ಬಾಲಕಿ ವಾಸಿಸುವ ತಾಂಡಾದವನೇ ಆಗಿದ್ದಾನೆ. ಈತ ವಿವಾಹಿತನಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಆದರೆ, ಈತನ ವಿಕೃತಿ ಇಂದಾನೋ ಏನೋ ಹೆಂಡತಿ, ತನ್ನ ಮಕ್ಕಳೊಂದಿಗೆ ತವರು ಸೇರಿದ್ದಾಳೆ. ಇದೀಗ ಒಬ್ಬಂಟಿಯಾಗಿರುವ ಕುಮಾರ, ಇಂತಹ ವಿಕೃತಿಗಿಳಿದು ಜನರಿಂದ ಒದೆ ತಿಂದಿದ್ದಲ್ಲದೇ ಕಂಬಿ ಎಣಿಸುವಂತಾಗಿದೆ.
 

Follow Us:
Download App:
  • android
  • ios