Murder case: ಪಕ್ಕದ ಮನೆಯವ್ಳ ಜತೆ ಮಾತಾಡಿದ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿ ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !
ಪತ್ನಿಯನ್ನು ಕೊಲೆ ಮಾಡಿ ಶವವನ್ನು ಬ್ಯಾರಲ್‌ನಲ್ಲಿ ಮುಚ್ಚಿಟ್ಟು ಕಾಡಿನಲ್ಲಿ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕಾರವಾರ (ಫೆ.26) : ಪತ್ನಿಯನ್ನು ಕೊಲೆ ಮಾಡಿ ಶವವನ್ನು ಬ್ಯಾರಲ್‌ನಲ್ಲಿ ಮುಚ್ಚಿಟ್ಟು ಕಾಡಿನಲ್ಲಿ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜಿಲ್ಲೆಯ ಹಳಿಯಾಳ(Haliyala) ತಾಲೂಕಿನ ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ(Tukaram madivala) ಎಂಬಾತನೇ ಆರೋಪಿ. ತನ್ನ ಪತ್ನಿ ಶಾಂತಕುಮಾರಿ (38), ಪಕ್ಕದ ಮನೆಯ ಮಹಿಳೆಯೊಂದಿಗೆ ಮಾತನಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ನೀರಿನ ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟಿದ್ದ. ಮರುದಿನ ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದು ರಾಮನಗರದ ಕಾಡಿನಲ್ಲಿ ಮೃತ ದೇಹವನ್ನು ಎಸೆದಿದ್ದ. ಬಳಿಕ ಆತುರವಾಗಿ ಮನೆ ಖಾಲಿಮಾಡುವಾಗ ಪೊಲೀಸರಿಗೆ ಮನೆ ಮಾಲೀಕರಿಂದ ಮಾಹಿತಿ ಲಭಿಸಿ ಆರೋಪಿಯನ್ನು ಬಂಧಿಸಲಾಯಿತು.
ಈ ಮಧ್ಯೆ, ಶನಿವಾರ ಮನೆ ಖಾಲಿ ಮಾಡಿ, ಕೆಲವು ಸಾಮಗ್ರಿಗಳನ್ನು ವಾಹನಕ್ಕೆ ತುಂಬುತ್ತಿದ್ದ. ಈ ಬಗ್ಗೆ ಮನೆಯ ಮಾಲಿಕರು ಪ್ರಶ್ನಿಸಿದಾಗ ಅರ್ಜೆಂಟಾಗಿ ಗೋವಾಕ್ಕೆ ಹೋಗಿ ಬರುತ್ತೇನೆ ಎಂದು ತಿಳಿಸಿದ. ಈ ಮಧ್ಯೆ, ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದ ವಿಚಾರ ಅವರಿಗೆ ತಿಳಿದಿತ್ತು. ಇದರಿಂದ ಸಂಶಯಗೊಂಡು ಮನೆಯ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ನಾಕಾಬಂಧಿ ರಚಿಸಿ, ತಪಾಸಣೆ ನಡೆಸಿದಾಗ ಈತ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಹತ್ಯೆ ವಿಷಯ ಬಹಿರಂಗಗೊಂಡಿದೆ.
ಕೊಲೆಗೆ ಸಹಕರಿಸಿದ ರಿಜ್ವಾನ್ ಕುಂಬಾರಿ(Rijwan kumabari), ಸಮೀರ್ ಪಂತೋಜಿಯನ್ನು ಕೂಡ ಬಂಧಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ