Asianet Suvarna News Asianet Suvarna News

ತಾತನ ಅಂತ್ಯಕ್ರಿಯೆಗೆ ಹೊರಟಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮರಣ ಇದೆಂಥ ದುರ್ವಿಧಿ!

ತಾತನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮಣರಕ್ಕೀಡಾದ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಬಳಿ ನಡೆದಿದೆ.

A grandson dies after bike accident when he going to his grandfathers funera at mysuru rav
Author
First Published Nov 27, 2023, 1:00 PM IST

ಚಾಮರಾಜನಗರ (ನ.27): ತಾತನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮಣರಕ್ಕೀಡಾದ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಬಳಿ ನಡೆದಿದೆ.

ನಿತೀಶ್ ಪೂಜಾರಿ(23) ಮೃತ ಮೆಡಿಕಲ್ ವಿದ್ಯಾರ್ಥಿ. ಮೂಲತಃ ಉಡುಪಿ ಜಿಲ್ಲೆಯ ಹೆಬ್ರಿಯವಾರದ ನಿತೀಶ್ ಪೂಜಾರಿ. ಚಾಮರಾಜನಗರ  ಸರ್ಕಾರಿ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಊರಿನಲ್ಲಿ ತಾತ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣವೇ ಬೈಕ್ ಏರಿ  ಮೈಸೂರಿನತ್ತ ಹೊರಟಿದ್ದ ಮೊಮ್ಮಗ. ಪಣ್ಯದ ಹುಂಡಿ ಬಳಿ ಬರುತ್ತಿದ್ದ ಅಪಘಾತ ಸಂಭವಿಸಿದೆ. ರೋಡ್ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರುವ ಶಂಕೆ. ತಾತನ ಸಾವಿನ ದುಃಖದಲ್ಲಿದ್ದ ಮೊಮ್ಮಗ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವುದು ಕುಟುಂಬಕ್ಕೆ ಡಬಲ್ ಶಾಕ್ ನೀಡಿದೆ.

ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ!

ಘಟನೆ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Follow Us:
Download App:
  • android
  • ios