ಹೊರರಾಜ್ಯದ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಆಟೋದಿಂದ ಕೆಳಗೆ ಇಳಿಸಿ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆಟೋ ಚಾಲಕರನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮಾ.7) ಹೊರರಾಜ್ಯದ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಆಟೋದಿಂದ ಕೆಳಗೆ ಇಳಿಸಿ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆಟೋ ಚಾಲಕರನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿ ನಿವಾಸಿ ಆರ್‌.ರೋಬಿನ್‌ (48) ಮತ್ತು ಸೇವಾನಗರದ ಯುವರಾಜ್‌ (39) ಬಂಧಿತ ಆಟೋ ಚಾಲಕರು. ಕೃತ್ಯಕ್ಕೆ ಬಳಸಿದ್ದ ಆಟೋ, ಮೊಬೈಲ್‌, .1 ಸಾವಿರ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಿಂಟಿಂಗ್‌ ಪ್ರೆಸ್‌ ಮಾಲಿಕ ಲಿಯಾಕತ್‌ ಹತ್ಯೆಗೆ ಕಾರಣವಾಗಿದ್ದು ಸಲಿಂಗಕಾಮ!

ಅಸ್ಸಾಂ ಮೂಲದ ನಾಲ್ವರು ಯುವಕರು ಗುವಾಹಟಿಯಿಂದ ರೈಲಿನಲ್ಲಿ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಮಾ.2ರಂದು ಮಧ್ಯಾಹ್ನ 1.30ಕ್ಕೆ ಬಂದಿದ್ದಾರೆ. ಅಲ್ಲಿಂದ ಮಾಗಡಿ ರಸ್ತೆ ಸುಮನಹಳ್ಳಿ ಜಂಕ್ಷನ್‌ಗೆ ಹೋಗಲು ಆಟೋ ಬಾಡಿಗೆಗೆ ಕರೆದಾಗ .600 ಕೇಳಿದ್ದಾನೆ. ಇದಕ್ಕೆ ಒಪ್ಪಿದ ಯುವಕರು ಆಟೋ ಏರಿ ಕುಳಿತ್ತಿದ್ದಾರೆ. ಆಟೋವನ್ನು ಸ್ವಲ್ಪ ದೂರ ಚಾಲನೆ ಮಾಡಿದ ಚಾಲಕ ರೋಬಿನ್‌, ನಾಲ್ವರು ತಲಾ .600 ಬಾಡಿಗೆ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾನೆ. ಆಗ ಯುವಕರು ಇದಕ್ಕೆ ನಿರಾಕರಿಸಿದ್ದಾರೆ. ಇದೇ ಸಮಯಕ್ಕೆ ಮತ್ತೊಬ್ಬ ಆಟೋ ಚಾಲಕ ಯುವರಾಜ್‌ ಅಲ್ಲಿಗೆ ಬಂದು ಸಮಾಧಾನಪಡಿಸಿದ್ದಾನೆ. ಬಳಿಕ ಇಬ್ಬರೂ ಆಟೋ ಚಾಲಕರು ಯುವಕರಿಂದ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದಾರೆ. ಬಳಿಕ ಯುವರಾಜ್‌ ಅದೇ ಆಟೋ ಹತ್ತಿಕೊಂಡಿದ್ದಾನೆ.

ಆಟೋ ಚಿಕ್ಕಬಾಣಸವಾಡಿ(Chikkabanasavadi) ಬಳಿ ಬಂದಾಗ ಆಟೋ ನಿಲ್ಲಿಸಿ ಒತ್ತಾಯಪೂರ್ವಕವಾಗಿ ನಾಲ್ವರು ಯುವಕರನ್ನು ಕೆಳಗೆ ಇಳಿಸಿ ರೈಲ್ವೆ ಟ್ರಾಕ್‌ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ತಲಾ .600 ಕೊಡುವಂತೆ ಯುವಕರನ್ನು ಒತ್ತಾಯಿಸಿದ್ದಾರೆ. ಈ ವೇಳೆ ಯುವಕನೊಬ್ಬನಿಂದ .500, ಮತ್ತೊಬ್ಬನಿಂದ .600 ಕಿತ್ತುಕೊಂಡಿದ್ದಾರೆ. ಬಳಿಕ ಚಾಕು ತೋರಿಸಿ ಹೆದರಿಸಿ ಇನ್ನೊಬ್ಬ ಯುವಕನಿಂದ .3,300 ಫೋನ್‌ ಪೇ ಮಾಡಿಸಿಕೊಂಡು ಬೆದರಿಸಿ ಅಲ್ಲಿಂದ ಯುವಕರನ್ನು ಓಡಿಸಿದ್ದರು.

Murder case: ಬಾರ್‌ನಲ್ಲಿ ಕಿರಿಕ್‌ ಮಾಡಿದ್ದ ಡಾಕ್ಟರ್: ಗೆಳೆಯರೇ ಕೊಂದು ಸುಟ್ಟು ಹಾಕಿದರು!

ಹಣ ಕಳೆದುಕೊಂಡ ಯುವಕರು ಕಾರ್ಖಾನೆ ಮಾಲಿಕರಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿ, ಮಾಲಿಕನ ಮುಖಾಂತರ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಘಟನೆ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.