Asianet Suvarna News Asianet Suvarna News

ಆಗ್ರೋ ಅಂಗಡಿ ಮಾಲೀಕನ‌ ಮಾತು ನಂಬಿ ಕೆಟ್ಟ ರೈತ! ನಕಲಿ ಕ್ರಿಮಿನಾಶಕ ಸಿಂಪಡಿಸಿ ಬೆಳೆ ಕಳೆದುಕೊಂಡ ಅನ್ನದಾತ!

ಅಗ್ರೋ ಅಂಗಡಿ ಮಾಲೀಕನ ಮಾತನ್ನ ನಂಬಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ರೈತನೋರ್ವ ಬೆಳೆ ಕಳೆದುಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.

A farmer who lost his crop after spraying fake pesticides in kalaghatagi at dharwad rav
Author
First Published Jul 5, 2024, 6:57 PM IST


ಹುಬ್ಬಳ್ಳಿ (ಜು.5): ಅಗ್ರೋ ಅಂಗಡಿ ಮಾಲೀಕನ ಮಾತನ್ನ ನಂಬಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ರೈತನೋರ್ವ ಬೆಳೆ ಕಳೆದುಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ರೈತ. ಕಳೆದ ನಾಲ್ಕೈದು ದಿನಗಳ ಹಿಂದೆ ಗೋವಿನ ಜೋಳ ಬೆಳೆಯಲ್ಲಿ ಕಳೆರೋಗ ಕಾಣಿಸಿಕೊಂಡಿತ್ತು. ಕಳೆರೋಗವನ್ನ ಹೋಗಲಾಡಿಸಲು ಕಲಘಟಗಿ ಶ್ರೀ ವರಮಹಾಲಕ್ಷ್ಮಿ ಆಗ್ರೋ ಮಾಲೀಕನ ಸಲಹೆ ಕೇಳಿದ ರೈತರು. ಈ ವೇಳೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದ ಮಾಲೀಕ. 

ಹೆರಿಗೆ ವೇಳೆ ಶಿಶುವಿನ ಗುದದ್ವಾರ ಕತ್ತರಿಸಿದ ವೈದ್ಯ! ಎರಡು ದಿನ ಜೀವನ್ಮರಣ ಹೋರಾಟ ನಡೆಸಿ ಮಗು ಸಾವು!

ಮಾಲೀಕನ ಮಾತು ನಂಬಿದ ರೈತ ಕೈಗೆ ಬಂದಿದ್ದ ಬೆಳೆಗೆ ಅಗ್ರೋ ಮಾಲೀಕನ ಸಲಹೆಯಂತೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಖರೀದಿಸಿ ಬೆಳೆಗೆ ಸಿಂಪಡಿಸಿದ್ದಾರೆ. ಕ್ರಿಮಿನಾಶಕ ಸಿಂಪಡಿಸಿದ ಮಾರನೆಯ ದಿನವೇ ಒಣಗಿ‌ ನಿಂತ ಗೋವಿನ ಜೋಳ. ಕಳೆರೋಗ ಹೋಗುವ ಬದಲು ಮಳೆಗಾಲದಲ್ಲೇ ಬೆಳೆಯೇ ಸಂಪೂರ್ಣವಾಗಿ ಒಣಗಿ ನಿಂತಿದೆ. ರೈತ ಕಂಗಾಲಾಗಿದ್ದಾನೆ. ಅಗ್ರೋ ಮಾಲೀಕನ ಮಾತು ನಂಬಿ ಮೋಸ ಹೋದೆ ಎಂದು ಕಣ್ಣೀರಿಟ್ಟಿರುವ ರೈತ. ಬೆಳೆ ಒಣಗಿದ ಕಾರಣ ದಿಕ್ಕು ತೋಚದಂತಾಗಿರುವ ಅನ್ನದಾತ. ಇದೇ ರೀತಿ ಆಗ್ರೋ ಅಂಗಡಿ ಮಾಲೀಕನಿಂದ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕವನ್ನ ಹಲವು ರೈತರಿಗೆ ವಿತರಣೆ ಮಾಡಲಾಗಿದೆ.

Latest Videos
Follow Us:
Download App:
  • android
  • ios