Chamarajangara: ಇರುವೆಗೆ ಸಿಂಪಡಿಸುವ ಔಷಧಿ ಸೇವಿಸಿ 5 ವರ್ಷದ ಬಾಲಕ ಸಾವು!

ಇರುವೆಗೆ ಸಿಂಪಡಿಸುವ ಔಷಧಿ ಸೇವಿಸಿ 5 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜರುಗಿದೆ.

A 5-year-old boy died after eating an ant spray gow

ಚಾಮರಾಜನಗರ (ಮಾ.3): ಇರುವೆಗೆ ಸಿಂಪಡಿಸುವ ಔಷಧಿ ಸೇವಿಸಿ ಐದು ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜರುಗಿದೆ. ತಾಲ್ಲೂಕಿನ ಪುಟ್ಟಿರಮ್ಮನ ದೊಡ್ಡಿ ಗ್ರಾಮದ ಕೇತೆಗೌಡ ಎಂಬಾತನ ಮಗ ಶಿವು (5) ಎಂಬ ಬಾಲಕ ಮೃತ್ತ ದುರ್ದೈವಿ. ಈತನು ಮಾ.1 ರಂದು ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಕಿಟಕಿಯ ಬಳಿ ಇರುಗೆ ಸಿಂಪಡಿಸಲು ತಂದಿಟ್ಟಿದ್ದ ಇರುವೆ ಪುಡಿಯನ್ನು ತಿಂದು ನರಳಾಡುತ್ತಿದ್ದಾಗ ಕಂಡು ಮನೆಯವರು ತಕ್ಷಣ ಕಾಮಗೆರೆ ಆಸ್ಪತ್ರೆಗೆ ಕರೆದ್ದೋಗಿ ಪ್ರಥಮ ಚಿಕಿತ್ಸೆ ಕೊಡಿಸಿದರು.ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಯಿತು. ನಿನ್ನೆ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕನು ಮೃತ್ತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಮೈಸೂರಿಗೆ ತೆರಳಿ ಇಂದು ಶವಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದರು.

5 ಮದ್ವೆಯಾದವ 5ನೇ ಹೆಂಡ್ತಿಯಿಂದ ಬರ್ಬರವಾಗಿ ಹತ್ಯೆಯಾದ: ಮರ್ಮಾಂಗ ಕತ್ತರಿಸಿ ಎಸೆದ ಪತ್ನಿ

ಆನೆ ದಾಳಿಗೆ ರೈತ ಬಲಿ
ಆನೇಕಲ್‌: ದನ ಮೇಯಿಸಲು ಹೋದ ರೈತ ಕೂಲಿ ಕಾರ್ಮಿಕನೋರ್ವ ಆನೆ ದಾಳಿಗೆ ಸಿಕ್ಕು ಮೃತಪಟ್ಟದಾರುಣ ಘಟನೆ ಆನೇಕಲ್‌ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮ ಸೊಳ್ಳೆಪುರ ದೊಡ್ಡಿ ಬಳಿ ನಡೆದಿದೆ. ಅಲಗಪ್ಪ(50) ಕೃಷಿ ಕೂಲಿ ಕಾರ್ಮಿಕ ಮೃತಪಟ್ಟನತದೃಷ್ಟ. ಎಂದಿನಂತೆ ಕಾಡಿಗೆ ದನಗಳನ್ನು ಮೇಯಿಸಲು ಹೋಗುತ್ತಿದ್ದ ಅಲಗಪ್ಪ ನಿನ್ನೆ ಸಹ ಕಾಡಿಗೆ ಹೋದವರು ಸಂಜೆಯಾದರೂ ಮನೆಗೆ ಬರಲಿಲ್ಲ. ಬಂಧುಗಳು ಸೇರಿದಂತೆ ಗ್ರಾಮಸ್ಥರು ಸುತ್ತಮುತ್ತಲೂ ಎರಡು ದಿನಗಳಿಂದಲೂ ಹುಡುಕಾಟ ನಡೆಸಿದಾಗ ಅಲಗಪ್ಪನ ಕಾಡಂಚಿನಲ್ಲಿ ಪತ್ತೆಯಾಗಿದೆ. ಅಲಗಪ್ಪನ ಮೈಮೇಲೆ ಆನೆಯು ತುಳಿದ ಗಾಯಗಳಾಗಿದ್ದು, ಸ್ಥಳದಲ್ಲಿ ಆನೆಯ ಹೆಜ್ಜೆಯ ಗುರುತು ಕಂಡು ಬಂದಿದೆ. ಘಟನೆ ಸಂಬಂಧ ಬನ್ನೇರುಘಟ್ಟಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಮೇಲೆ ಆಕ್ರೊಶ ವ್ಯಕ್ತಪಡಿಸಿದರು.

'ಎಷ್ಟ್‌ ಪೌಡರ್‌ ಬಡ್ಕೊಂಡ್ರೂ ಹೀರೋಯಿನ್‌ ಆಗಲ್ಲ..' ಎನ್ನುತ್ತಿದ್ದ ಗಂಡ, ಕೃಷ್ಣವರ್ಣದ ಪತ್ನಿಯನ್ನು ಕೊಂದ!

ಚಿರತೆ ದಾಳಿಗೆ ಕರು ಬಲಿ
ಮಾಗಡಿ: ಚಿರತೆಯ ದಾಳಿಗೆ ಮನೆಯ ಮುಂದೆ ಕಟ್ಟಿದ್ದ ಕರುವೊಂದು ಸಾವನಪ್ಪಿರುವ ಘಟನೆ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಗ್ರಾಮದ ಅರುಣ್‌ ಎಂಬುವವರು ತಮ್ಮ ಮನೆಯ ಮುಂದೆ ಕಟ್ಟು ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಕರುವನ್ನು ಬಲಿ ಪಡೆದುಕೊಂಡಿದೆ. ಸುಮಾರು 30 ಸಾವಿರ ರೂ. ಬೆಲೆ ಬಾಳುವ ಕರು ಇದಾಗಿದ್ದು, ಕರುವನ್ನು ಕಳೆದುಕೊಂಡ ಅರುಣ್‌ ಕಂಗಾಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೆಮ್ಮದಿಯಾಗಿ ಜೀವನ ನಡೆಸುವುದೇ ಕಷ್ಟಕರವಾಗಿ ಪರಿಣಮಿಸಿದೆ. ಪದೇ ಪದೇ ಗ್ರಾಮಗಳಿಗೆ ನುಗ್ಗುತ್ತಿರುವ ಚಿರತೆಯಿಂದ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದ್ದು, ಜನ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಸರಿ ಹಿಡಿಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios