Asianet Suvarna News Asianet Suvarna News

ಕೋಲಾರ: ಆತ್ಮಹತ್ಯೆಗೆ ಶರಣಾದ 9 ನೇ ತರಗತಿ ವಿದ್ಯಾರ್ಥಿ

ಓದು ಅಂತ ಬುದ್ಧಿವಾದ ಹೇಳಿದಕ್ಕೆ 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ. 

9th Class Student Who Committed Suicide in Kolar grg
Author
First Published Jan 5, 2023, 10:47 PM IST

ಕೋಲಾರ(ಜ.05): ಓದು ಅಂತ ಬುದ್ಧಿವಾದ ಹೇಳಿದಕ್ಕೆ 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಉದಯ್‌ಕುಮಾರ್(16) ಎಂಬಾತನೇ ಮೃತ ವಿದ್ಯಾರ್ಥಿಯಾಗಿದ್ದಾನೆ. 

ಪೋಷಕರು ಬುದ್ಧಿವಾದ ಹೇಳಿದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸಿದ್ದ ಉದಯ್ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

ಅನಸ್ತೇಸಿಯಾ ಚುಚ್ಚಿಕೊಂಡು 24 ವರ್ಷದ ಯುವ ವೈದ್ಯೆ ಆತ್ಮಹತ್ಯೆ

ಈ ಸಂಬಂಧ ಮೃತನ ತಂದೆ ಆದ್ಯಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುಡಿಆರ್ ಅಡಿ ಪೋಲಿಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios