ವಿದ್ಯಾರ್ಥಿಯ ಪೋಷಕರು ಆತ ಶಾಲೆಯಿಂದ ಮನೆಗೆ ಬಂದಾಗ ಅವನ ಗಾಯಗಳನ್ನು ನೋಡಿ ಗಾಬರಿಗೊಂಡರು. ಬಳಿಕ, ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಪೊಲೀಸರು ಮತ್ತು ಶಾಲೆಗೆ ದೂರು ನೀಡಿದ್ದಾರೆ. 

ಇಂದೋರ್ (ನವೆಂಬರ್ 27, 2023): ಮಧ್ಯ ಪ್ರದೇಶದ ಇಂದೋರ್‌ನ ಖಾಸಗಿ ಶಾಲೆಯೊಂದರಲ್ಲಿ ಸಣ್ಣ ಜಗಳಕ್ಕೆ 4 ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದು ಸಹಪಾಠಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾಂಪಾಸ್‌ನಿಂದ ಹಲ್ಲೆ ನಡೆಸಿದ್ದು, ಇದರಿಂದ 9 ವರ್ಷದ ವಿದ್ಯಾರ್ಥಿಯ ದೇಹದ ಹಲವು ಕಡೆ ಗಾಯಗಳಾಗಿದೆ. 

ವಿದ್ಯಾರ್ಥಿಯ ಪೋಷಕರು ಆತ ಶಾಲೆಯಿಂದ ಮನೆಗೆ ಬಂದಾಗ ಅವನ ಗಾಯಗಳನ್ನು ನೋಡಿ ಗಾಬರಿಗೊಂಡರು. ಬಳಿಕ, ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಪೊಲೀಸರು ಮತ್ತು ಶಾಲೆಗೆ ದೂರು ನೀಡಿದ್ದಾರೆ. 

ಇದನ್ನು ಓದಿ: ಟಿಂಡರ್‌ ಬಳಸೋ ಮುನ್ನ ಹುಷಾರ್: ‘ಪ್ರಿಯೆ’ ಎಂದು ಡೇಟ್‌ ನೆಪ ಹೇಳಿ ಯುವಕನ ಬರ್ಬರ ಕೊಲೆ ಮಾಡಿದ ಸುಂದರಿ!

ಇನ್ನು, ಈ ಸಂಬಂಧ ಇಂದೋರ್‌ನ ಏರೋಡ್ರೋಮ್ ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಸಾಹು ಮಾಹಿತಿ ನೀಡಿದ್ದು, ‘ವಿದ್ಯಾರ್ಥಿಯ ಪೋಷಕರು, ಅತನ ಸಹಪಾಠಿಗಳು ಮತ್ತು ಶಾಲಾ ಅಧಿಕಾರಿಗಳ ವಿರುದ್ಧ ದೂರು ನೀಡಿ ನಮ್ಮನ್ನು ಸಂಪರ್ಕಿಸಿದರು. ಮಕ್ಕಳು ನಮ್ಮ ಮಗನನ್ನು ಹೊಡೆದಿದ್ದಾರೆ ಮತ್ತು ಕಾಂಪಾಸ್‌ ಚೂಪಾದ ತುದಿಯನ್ನು ಬಳಸಿ ಆತನ ದೇಹದ ಮೇಲೆ ಅನೇಕ ಗಾಯಗಳನ್ನು ಮಾಡಿದ್ದಾರೆ ಎಂದೂ ದೂರಿದ್ದಾರೆ. ಹಾಗೂ, ಪೋಷಕರು ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ, ಪೋಷಕರೊಂದಿಗೆ ಮಾತುಕತೆ: ಪೊಲೀಸ್‌

ನಾವು ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ದೂರುದಾರ ಹಾಗೂ ಹಲ್ಲೆ ಮಾಡಿರುವ ಆರೋಪವಿರುವ ಪೋಷಕರೊಂದಿಗೆ ಮಾತನಾಡುತ್ತಿದ್ದೇವೆ ಎಂದೂ ರಾಜೇಶ್‌ ಸಾಹು ಹೇಳಿದರು. ಜತೆಗೆ, ಪೊಲೀಸರು ಶಾಲಾ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಸೋಮವಾರ ಬರುವುದಾಗಿ ಹೇಳಿದರು, ನಾವು ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ. ಎರಡೂ ಗುಂಪುಗಳನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಮಧ್ಯ ಪ್ರದೇಶದ ಇಂದೋರ್‌ನ ಏರೋಡ್ರೋಮ್ ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಸಾಹು ತಿಳಿಸಿದ್ದಾರೆ.


ಇದನ್ನೂ ಓದಿ: ದುಬೈಗೆ ಕರ್ಕೊಂಡು ಹೋಗ್ಲಿಲ್ಲ ಅಂತ ಗಂಡನ ಮೂಗಿಗೆ ಗುದ್ದಿದ ಹೆಂಡ್ತಿ: ಉದ್ಯಮಿ ಪ್ರಾಣ ಪಕ್ಷಿಯೇ ಹಾರಿ ಹೋಯ್ತು!

ಇದನ್ನೂ ಓದಿ: ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್‌ ಮಾಡಿದ ಬಾಲಕ!