Asianet Suvarna News Asianet Suvarna News

ಗೂಂಡಾ ಕಾಯ್ದೆಯಡಿ 9 ರೌಡಿಶೀಟ​ರ್‌ಗಳ ಬಂಧನ

ಆರೋ​ಪಿ​ಗಳ ವಿರುದ್ಧ ಕೊಲೆ, ಕೊಲೆ ಯತ್ನ, ಹಲ್ಲೆ, ಸುಲಿಗೆ, ಸರ ಅಪ​ಹ​ರಣ, ಗಾಂಜಾ, ಅತ್ಯಾ​ಚಾರ, ಪೊಲೀಸ್‌ ಅಧಿ​ಕಾ​ರಿ​ಗಳ ಮೇಲೆ ಹಲ್ಲೆ, ಅಕ್ರಮ ಚಟು​ವ​ಟಿ​ಕೆ​ಗ​ಳು ಸೇರಿ ಹತ್ತಾರು ಪ್ರಕ​ರ​ಣ​ಗಳು ದಾಖಲು| ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಖದೀಮರು| 

9 Rowdysheeters Arrested for Crime Cases in Bengaluru grg
Author
Bengaluru, First Published Apr 29, 2021, 7:20 AM IST

ಬೆಂಗಳೂರು(ಏ.29): ಕಳೆದ ಮೂರು ತಿಂಗಳ ಅವಧಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಟು ಮಂದಿ ರೌಡಿಶೀಟರ್‌ಗಳು ಸೇರಿ ಒಟ್ಟು ಒಂಬತ್ತು ಮಂದಿಯನ್ನು ಕೇಂದ್ರ ಅಪ​ರಾಧ ವಿಭಾ​ಗ​ದ (​ಸಿ​ಸಿ​ಬಿ) ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಅಮೃ​ತ​ಹಳ್ಳಿ ಠಾಣೆ ರೌಡಿ​ಶೀ​ಟರ್‌ ಮುನಿ​ಕೃಷ್ಣ (27), ಬನ​ಶಂಕರಿ ಠಾಣೆ ರೌಡಿ​ಶೀ​ಟರ್‌ ಸಾಗರ್‌ ಅಲಿ​ಯಾಸ್‌ ಇಟ್ಟ​ಮಡು ​(22), ಬೈಯ​ಪ್ಪ​ನ​ಹಳ್ಳಿ ಠಾಣೆಯ ರಾಜು ಅಲಿ​ಯಾಸ್‌ ರಾಜು​ದೊರೈ (25), ಬ್ಯಾಡ​ರ​ಹ​ಳ್ಳಿ ಠಾಣೆ ವಾಸು​ದೇವ ಅಲಿ​ಯಾಸ್‌ ವಾಸು(32), ಹುಳಿ​ಮಾವು ಠಾಣೆಯ ಚೇತನ್‌ ಅಲಿ​ಯಾಸ್‌ ಮಾದೇಶ(29), ಇಂದಿ​ರಾ​ನಗರ ಠಾಣೆ​ಯ ಕೋಟೇ​ಶ್ವ​ರನ್‌ ಅಲಿ​ಯಾಸ್‌ ಕೋಟೆ​(23), ಅಮೃ​ತ​ಹಳ್ಳಿ ನಿವಾಸಿ ಸ್ಯಾಮು​ಯಲ್‌(24), ಯಶ​ವಂತ​ಪುರ ಠಾಣೆ​ಯ ಮಂಜು​ನಾ​ಥ್‌(35) ಎಂಬ ರೌಡಿ​ಶೀ​ಟ​ರ್‌​ಗ​ಳನ್ನು ಬಂಧಿ​ಸ​ಲಾ​ಗಿದ್ದು, ಇದ​ರೊಂದಿಗೆ ನಗ​ರದ ವಿವಿಧ ಪೊಲೀ​ಸ್‌ ಠಾಣೆ​ಗಳ ವ್ಯಾಪ್ತಿ​ಯಲ್ಲಿ ಇಸ್ಪೀಟ್‌ ಅಡ್ಡೆ​ಗ​ಳು, ವಿಡಿಯೋ ಗೇಮ್ಸ್‌​ಗ​ಳನ್ನು ನಡೆ​ಸು​ತ್ತಿದ್ದ ಬಿ.ಹ​ರಿ​ರಾ​ಜ​ಶೆಟ್ಟಿ ಅಲಿ​ಯಾಸಿ ಹರೀಶ್‌ (58) ಎಂಬಾ​ತ​ನನ್ನು ಗೂಂಡಾ ಕಾಯ್ದೆ ಅಡಿ ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ.

ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್...ಗರ್ಭಿಣಿ ಪತ್ನಿ ಹತ್ಯೆ ಮಾಡಿದ!

ಆರೋ​ಪಿ​ಗಳ ವಿರುದ್ಧ ನಗ​ರದ ವಿವಿಧ ಪೊಲೀಸ್‌ ಠಾಣೆ​ಗಳ ವ್ಯಾಪ್ತಿ​ಯಲ್ಲಿ 8-10 ವರ್ಷ​ಗ​ಳಿಂದ ಕೊಲೆ, ಕೊಲೆ ಯತ್ನ, ಹಲ್ಲೆ, ಸುಲಿಗೆ, ಸರ ಅಪ​ಹ​ರಣ, ಗಾಂಜಾ, ಅತ್ಯಾ​ಚಾರ, ಪೊಲೀಸ್‌ ಅಧಿ​ಕಾ​ರಿ​ಗಳ ಮೇಲೆ ಹಲ್ಲೆ, ಅಕ್ರಮ ಚಟು​ವ​ಟಿ​ಕೆ​ಗ​ಳು ಸೇರಿ ಹತ್ತಾರು ಪ್ರಕ​ರ​ಣ​ಗಳು ದಾಖ​ಲಾ​ಗಿವೆ. ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಹೀಗಾಗಿ ಗೂಂಡಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios