ಕಲಬುರಗಿ: ವರ್ಕ್ ಫ್ರಮ್ ಹೋಮ್ ಹೆಸರಲ್ಲಿ 89 ಲಕ್ಷ ವಂಚನೆ, ಕಂಗಾಲಾದ ಮಹಿಳೆ..!
ಕಿಶೋರ್ ಎಸ್, ಅಕಿಲೇಶ ಗೌಡ, ಶರತ್ ಎಂಬುವವರು ಸೇರಿ ಮಹಿಳೆಯನ್ನು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಂದ 89,12,395 ರು. ಜಮಾ ಮಾಡಿಸಿಕೊಂಡು ಹಣ ಮರಳಿ ನೀಡದೆ ವಂಚನೆ ಮಾಡಿದ್ದಾರೆ.
ಕಲಬುರಗಿ(ಜ.03): ಫ್ಲೈಟ್ ನೆಟ್ವರ್ಕ್ ಸೈಟ್‍ನಲ್ಲಿ ವರ್ಕ್ ಫ್ರಮ್ ಹೋಮ್ ರಿಮೋಟ್ ಬೇಸ್ಡ್ ಜಾಬ್ ಇದ್ದು, ಫ್ಲೈಟ್ ಸೀಟ್ ಟಿಕೆಟ್ ಬುಕಿಂಗ್ ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಿ ಪ್ರತಿದಿನ 7 ಸಾವಿರ ರು. ಗಳಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ 89,12,395 ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಮಹಾತ್ಮ ಬಸವೇಶ್ವರ ಕಾಲೋನಿಯ ಪ್ರತಿಮಾ ಅಲಿಯಾಸ್ ಪ್ರೀತಿ ಗಿರೀಶ್ ಅಣಕಲ್ ಎಂಬುವವರೆ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.
QR ಕೋಡ್ ಸ್ಕ್ಯಾನ್ ಎಚ್ಚರ, ಹೈಟೆಕ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಬೆಂಗಳೂರು ನಿವಾಸಿ!
ಬಿಬಿಎಂ ಮುಗಿಸಿರುವ ಪ್ರತಿಮಾ ಅವರು ಮನೆಯಲ್ಲೇ ಕುಳಿತು ಆನ್‍ಲೈನ್ ಜಾಬ್ ಮಾಡಲು ಸಾಮಾಜಿ ಜಾಲತಾಣಗಳಲ್ಲಿ ವರ್ಕ್ ಫ್ರಮ್ ಜಾಬ್‍ಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರ ಮೊಬೈಲ್‍ಗೆ ನಿಖಿತಾ ಬನ್ಸಾಲ್ ಎಂಬುವವರಿಂದ ಮೆಸೇಜ್ ಬಂದಿದೆ. ಫ್ಲೈಟ್ ನೆಟ್ವರ್ಕ್ ಸೈಟ್‍ನಲ್ಲಿ ಸೀಟ್ ಬುಕಿಂಗ್ ಮಾಡಿದರೆ ಪ್ರತಿದಿನ 7 ಸಾವಿರ ರು.ಗಳಿಸಬಹುದು, ಇದನ್ನು ಪ್ರಾರಂಭಿಸಲು 10,848 ರು. ಜಮಾ ಮಾಡಿ ಎಂದು ಹೇಳಿದ್ದಾರೆ. ಆಗ ಪ್ರತಿಮಾ ಅವರು ಬ್ಯಾಂಕಿನಿಂದ ಹಣ ಜಮಾ ಮಾಡಿದ್ದಾರೆ. ಇದೇ ರೀತಿ ಕಿಶೋರ್ ಎಸ್, ಅಕಿಲೇಶ ಗೌಡ, ಶರತ್ ಎಂಬುವವರು ಸೇರಿ ಇವರನ್ನು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಂದ 89,12,395 ರು. ಜಮಾ ಮಾಡಿಸಿಕೊಂಡು ಹಣ ಮರಳಿ ನೀಡದೆ ವಂಚನೆ ಮಾಡಿದ್ದಾರೆ. ಪ್ರತಿಮಾ ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.