ತನ್ನ ಚಿನ್ನದ ಆಭರಣವನ್ನು ವಾಪಾಸ್‌ ಕೇಳಿದ್ದ ಕಾರಣಕ್ಕೆ ನೆರೆಮನೆಯ ಅಜ್ಜಿಯನ್ನು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಳಿಕ ಆಕೆಯ ಶವವನ್ನು ಆತ ತುಂಡು ತುಂಡಾಗಿ ಕತ್ತರಿಸಿದ್ದ ಎನ್ನಲಾಗಿದೆ.

ನವದೆಹಲಿ (ಮಾ.22): ತನ್ನ ಚಿನ್ನದ ಆಭರಣವನ್ನು ಮರಳಿ ನೀಡುವಂತೆ ಒತ್ತಾಯ ಮಾಡಿದ ನೆರೆಮನೆಯ 84 ವರ್ಷದ ಅಜ್ಜಿಯನ್ನು ವ್ಯಕ್ತಿಯೊಬ್ಬ ಕೊಂದಿದ್ದಲ್ಲದೆ, ಆಕೆಯ ದೇಹವನ್ನು ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ನಡೆದಿದೆ. ತನ್ನ ನೆರೆಹೊರೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಕಾರ್ಯಕ್ರಮಗಳಿದ್ದ ಕಾರಣಕ್ಕಾಗಿ ಓಬುಳಮ್ಮ ಎನ್ನುವ ಮಹಿಳೆ 15 ದಿನಗಳ ಹಿಂದೆ 7 ತೊಲದ ಚಿನ್ನಾಭರಣವನ್ನು ಸಾಲವಾಗಿ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಓಬುಳಮ್ಮ, ಕೃಷ್ಣಮೂರ್ತಿಯ ಬಳಿ ಕೊಟ್ಟ ಚಿನ್ನವನ್ನು ವಾಪಾಸ್‌ ಕೇಳಿದ್ದಾರೆ. ಆದರೆ, ಕೃಷ್ಣಮೂರ್ತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಗ್ರಾಮದ ಹಿರಿಯರಿಗೆ ಓಬುಳಮ್ಮ ಈ ವಿಚಾರ ತಿಳಿಸಿದ್ದರು. ಈ ಹಂತದಲ್ಲಿ ಊರ ಹಿರಿಯರು ಆತನಿಗೆ ಬೈದು, ಆಕೆಯಿಂದ ಪಡೆದುಕೊಂಡಿದ್ದ ಚಿನ್ನವನ್ನು ವಾಪಾಸ್‌ ನೀಡುವಂತೆ ತಿಳಿಸಿದ್ದರು.

Add Asianetnews Kannada as a Preferred SourcegooglePreferred

ಆದರೆ, ಅಜ್ಜಿ ಊರ ಹಿರಿಯರಿಗೆ ವಿಚಾರ ತಿಳಿಸಿದ್ದರಿಂದ ಕೃಷ್ಣಮೂರ್ತಿ ಹಾಗೂ ಆತನ ಕುಟುಂಬ ಕೋಪಗೊಂಡಿತ್ತು. ಅಜ್ಜಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಕೃಷ್ಣಮೂರ್ತಿ ಕಾಯುತ್ತಿದ್ದ. ಕಳೆದ ಶುಕ್ರವಾರ ಅಜ್ಜಿ ಹಾಗೂ ಕೃಷ್ಣಮೂರ್ತಿ ನಡುವೆ ಇದೇ ವಿಚಾರವಾಗಿ ಮಾತಿನ ಸಮರ ನಡೆದಿದೆ. ಇದರ ಬೆನ್ನಲ್ಲಿಯೇ ಕೊಡಲಿಯಿಂದ ಹೊಡೆದು ಅಜ್ಜಿಯ ಕೊಲೆ ಮಾಡಿದ್ದಾನೆ. ಆ ಬಳಿಕ ಆಕೃಯ ಮೃತದೇಹವನ್ನು ಕೊಡಲಿಯಿಂದಲೇ ತುಂಡು ತುಂಡಾಗಿ ಕತ್ತರಿಸಿ ಪಕ್ಕದಲ್ಲೇ ಇದ್ದ ಪೆನಕಚೇರ್ಲಾ ಅಣೆಕಟ್ಟಿನಲ್ಲಿ ಎಸೆದಿದ್ದಾನೆ.

ಮನೆ ಮುಂದಿನ ದಾರಿಗಾಗಿ ದಾಯಾದಿ ಕಲಹ; ಕೊಲೆಯಲ್ಲಿ ಅಂತ್ಯ !

ಮಹಿಳೆಯ ಮನೆಯವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಣೆಕಟ್ಟೆಯಿಂದ ಓಬುಳಮ್ಮ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮೃತ ಮಹಿಳೆ ಯರ್ರಗುಂಟ್ಲಾದಲ್ಲಿದ್ದ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ಅವರ ಕುಟುಂಬ ಸದಸ್ಯರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು.

ಮದ್ವೆಯಾದ ಖುಷಿಯಲ್ಲಿ ಗುಂಡು ಹಾರಿಸಿದ ವಧು, ಇವ್ನ ಮದ್ವೆಯಾದವ್ನ ಕಥೆ ಅಷ್ಟೇ!