ರಾತ್ರೋ ರಾತ್ರಿ 8 ಕ್ವಿಂಟಾಲ್ ಗೋವಿನ ಸಗಣಿ ಹೊತ್ತೊಯ್ದ ಕಳ್ಳರು!
* ಹಸುವಿನ ಸಗಣಿ ಮೇಲೂ ಕಳ್ಳರ ಕಣ್ಣು
* 1,600 ರೂ.ಗಳ ಮೌಲ್ಯದ ಸುಮಾರು 800 ಕೆಜಿ ಗೋವಿನ ಸಗಣಿ ಕಳ್ಳತನ
* ಛತ್ತೀಸ್ ಘಡ ಸರ್ಕಾರ 'ಗೋಧನ್ ನ್ಯಾಯ ಯೋಜನೆ'
* ಸ್ಥಳೀಯರು ಸಹ ಸಗಣಿ ಸಂಗ್ರಹಣೆಯಲ್ಲಿ ಫುಲ್ ಬ್ಯೂಸಿ
ಕೋರ್ಬಾ( ಜು. 21) ಕೊರೋನಾಕ್ಕೆ ಹಸುವಿನ ಸಗಣಿ ಕೊರೋನಾಕ್ಕೆ ಮದ್ದು ಎಂಬ ಸುದ್ದಿ ಬಂದಿತ್ತು. ಛತ್ತೀಸ್‌ಘಡದ ಕೊರ್ಬಾ ಜಿಲ್ಲೆಯ ಧುರೇನಾ ಗ್ರಾಮದಿಂದ 1,600 ರೂ.ಗಳ ಮೌಲ್ಯದ ಸುಮಾರು 800 ಕಿಲೋಗ್ರಾಂಗಳಷ್ಟು ಗೋವಿನ ಸಗಣಿ ಕಳ್ಳತನ ಮಾಡಲಾಗಿದೆ.
ಸಗಣಿ ಕಳ್ಳರ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 8 ಮತ್ತು ಜೂನ್ 9 ರ ಮಧ್ಯರಾತ್ರಿ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧುರೇನಾ ಗ್ರಾಮದಲ್ಲಿ ಈ ಕಳ್ಳತನ ನಡೆದಿದೆ.
ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ರಾಶಿ
1,600 ರೂ.ಗಳ ಮೌಲ್ಯದ 8 ಕ್ವಿಂಟಾಲ್ ಗೋವಿನ ಸಗಣಿ ಕಳವು ಮಾಡಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಜೂನ್ 15 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಡಿಪ್ಕಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾ ತಿಳಿಸಿದ್ದಾರೆ.
ಛತ್ತೀಸ್ ಘಡ ಸರ್ಕಾರ 'ಗೋಧನ್ ನ್ಯಾಯ ಯೋಜನೆ' ಯಡಿ ಹಸುವಿನ ಸಗಣಿ ಖರೀದಿ ಮಾಡುತ್ತೇನೆ ಎಂದು ಹೇಳಿದ ನಂತರ ಬೇಡಿಕೆ ಹೆಚ್ಚಿದೆ. ಕೆಜಿ ಸಗಣಿಗೆ 2 ರೂ. ಕೊಟ್ಟು ಖರೀದಿಸುವುದಾಗಿ ಸರ್ಕಾರ ಹೇಳಿದ ನಂತರ ಕಳ್ಳರ ಕಣ್ಣು ಸಗಣಿ ಮೇಲೆ ಬಿದ್ದಿದೆ. ಸರ್ಕಾರದ ಈ ಘೋಷಣೆ ನಂತರ ಸ್ಥಳೀಯರು ಸಹ ಸಗಣಿ ಸಂಗ್ರಹಣೆಯಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರ ಕೃಪೆ; ಎಎನ್‌ಐ)