ಸೀಮಂತವಾದ 3ನೇ ದಿನಕ್ಕೆ 8 ತಿಂಗಳ ಗರ್ಭಿಣಿ ಆತ್ಮಹತ್ಯೆ ಗಂಡನ ಕಿರುಕುಳ ಪ್ರೀತಿಸಿ ಮದುವೆಯಾಗಿದ್ದವಳ ಜೀವನ ಅಂತ್ಯ

ಪೀಣ್ಯ ದಾಸರಹಳ್ಳಿ (ನ.7) : ಸೀಮಂತ ಮಾಡಿದ ಮೂರೇ ದಿನಕ್ಕೆ 8 ತಿಂಗಳ ತುಂಬು ಗರ್ಭಿಣಿಯೊಬ್ಬರು ನೇಣಿಗೆ ಕೊರಳೊಡ್ಡಿದ್ದು, ಗರ್ಭದಲ್ಲಿದ್ದ 8 ತಿಂಗಳ ಮಗು ಕಣ್ಬಿಡುವ ಮುನ್ನವೇ ಮಸಣ ಸೇರಿದ ಮನ ಕಲಕುವ ಘಟನೆಯೊಂದು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!

ಬೆಂಗಳೂರು ಉತ್ತರ ತಾಲೂಕು ಶಿವನಪುರ ಗ್ರಾಮದ ರಾಜೀವ್‌ಗಾಂಧಿ ನಗರ ನಿವಾಸಿ 19 ವರ್ಷದ ಸೌಂದರ್ಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಮಾಕಳಿಯ ಖಾಸಗಿ ಗಾರ್ಮೆಂಟ್ಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ, ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹದ್ಯೋಗಿ ಸಂತೋಷ್‌ ಎಂಬುವನನ್ನು ಪ್ರೀತಿಸಿ ಕಳೆದ 10 ತಿಂಗಳ ಹಿಂದೆ ಮನೆಯವರಿಗೂ ತಿಳಿಸದೇ ಮದುವೆ ಮಾಡಿ ಕೊಂಡಿದ್ದಳು.

ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಈ ಹಿಂದೆಯೇ ಓರ್ವ ಯುವತಿಯನ್ನು ಮದುವೆಯಾಗಿ ಆಕೆಯನ್ನೂ ಕೈ ಬಿಟ್ಟಿದ್ದ ಸಂತೋಷ್‌ ನಿತ್ಯ ಪಾನಮತ್ತನಾಗಿ ಸೌಂದರ್ಯಳಿಗೆ ನಿರಂತರ ಕಿರುಕುಳ ಕೊಡುತ್ತಿದ್ದ. ಅಲ್ಲದೇ 10 ತಿಂಗಳ ಹಿಂದೆಯಷ್ಟೆಮದುವೆಯಾಗಿದ್ದ ಸೌಂದರ್ಯ 8 ತಿಂಗಳ ತುಂಬು ಗರ್ಭಿಣಿಯಾದ್ದರಿಂದ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿ ಕಳೆದ 3 ದಿನದ ಹಿಂದೆಯಷ್ಟೆಸೀಮಂತ ಶಾಸ್ತ್ರ ಮಾಡಲಾಗಿತ್ತು. ಆದರೆ ಸೀಮಂತ ಮಾಡಿದ್ದ ಮೂರೇ ದಿನಕ್ಕೆ ಇನ್ನೂ ಪ್ರಪಂಚ ಕಾಣದ ಕಂದಮ್ಮನೊಂದಿಗೆ ಚಿತೆ ಏರಿದ್ದಾಳೆ.

ಸೌಂದರ್ಯ ಕುಟುಂಬಸ್ಥರು, ಆಕೆಯ ಗಂಡ ಸಂತೋಷ್‌ ಮೇಲೆ ಕೊಲೆ ಆರೋಪ ಮಾಡಿದ್ದು, ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ನಾಲ್ವರು ಕುಖ್ಯಾತ ಕಳ್ಳರ ಸೆರೆ: 15 ಲಕ್ಷದ 60 ಮೊಬೈಲ್‌ ಜಪ್ತಿ

ಬೆಂಗಳೂರು: ಉದ್ಯಾನ, ರೈಲು, ಬಸ್‌ ನಿಲ್ದಾಣ ಹಾಗೂ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರನ್ನು ಟಾರ್ಗೆಟ್‌ ಮಾಡಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿಯ ಸೈಯದ್‌ ಫೈರೋಜ್‌ (34), ಶಬ್ಬೀರ್‌ ಅಹಮ್ಮದ್‌ (25), ತುಫೇಲ್‌ (23) ಮತ್ತು ಬರ್ಕತ್‌ (31) ಬಂಧಿತರು. ಆರೋಪಿಗಳಿಂದ .15 ಲಕ್ಷ ಮೌಲ್ಯದ 60 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆಗ್ನೇಯ ವಿಭಾಗದಲ್ಲಿ ಮೊಬೈಲ್‌ ಕಳ್ಳತನ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಮತ್ತು ತನಿಖೆ ವೇಳೆ ಸಿಕ್ಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾರೇಜ್ ನಲ್ಲಿ ಕೆಲ್ಸ, ಟೆಸ್ಟ್ ಡ್ರೈವ್ ನೆಪದಲ್ಲಿ ಮೊಬೈಲ್ ಕಳ್ಳತನದ ಮಾಡ್ತಿದ್ದ ಇಬ್ಬರು ಅಂದರ್

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಸೇರಿದ ವೇಳೆ ಪರಸ್ಪರ ಪರಿಚಯವಾಗಿದ್ದರು. ರೈಲು, ಬಸ್‌ ನಿಲ್ದಾಣ, ಪಾರ್ಕ್, ರಸ್ತೆಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೆಟ್‌ ಮಾಡಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ತುರ್ತು ಹಣದ ಅಗತ್ಯವಿದೆ ಎಂದು ಅಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.