Asianet Suvarna News Asianet Suvarna News

ಗ್ಯಾರೇಜ್ ನಲ್ಲಿ ಕೆಲ್ಸ, ಟೆಸ್ಟ್ ಡ್ರೈವ್ ನೆಪದಲ್ಲಿ ಮೊಬೈಲ್ ಕಳ್ಳತನದ ಮಾಡ್ತಿದ್ದ ಇಬ್ಬರು ಅಂದರ್

ಇತ್ತೀಚೆಗೆ ಕ್ರಿಮಿನಲ್ ಗಳೂ ಕೂಡ ಸ್ಮಾರ್ಟ್ ವರ್ಕ್ ಕಲ್ತುಬಿಟ್ಟಿದ್ದಾರೆ. ಅದ್ರಲ್ಲೂ ಮೊಬೈಲ್ ಕಳ್ರು ಮಾತ್ರ ಪೊಲೀಸ್ರಿಗೆ ಸಿಕ್ಕಾಕೋಬಾರ್ದು ಅಂತಾ ತಮ್ ಬ್ರೈನ್ ಓಡಿಸ್ತಿದ್ದಾರೆ. ಈ ರೀತಿ ಸ್ಮಾರ್ಟ್ ವರ್ಕ್ ಮಾಡಿ ಮೊಬೈಲ್ ಸ್ನಾಚಿಂಗ್ ಮಾಡ್ತಿದ್ದ ಖತರ್ನಾಕ್ ಆರೋಪಿಗಳನ್ನ ಕೋರಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

koramangala police arrested two mobile snatcher  in bengaluru gow
Author
First Published Oct 24, 2022, 5:25 PM IST

ವರದಿ: ಕಿರಣ್.ಕೆ.ಎನ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಅ.24): ಇತ್ತೀಚೆಗೆ ಕ್ರಿಮಿನಲ್ ಗಳೂ ಕೂಡ ಸ್ಮಾರ್ಟ್ ವರ್ಕ್ ಕಲ್ತುಬಿಟ್ಟಿದ್ದಾರೆ. ಅದ್ರಲ್ಲೂ ಮೊಬೈಲ್ ಕಳ್ರು ಮಾತ್ರ ಪೊಲೀಸ್ರಿಗೆ ಸಿಕ್ಕಾಕೋಬಾರ್ದು ಅಂತಾ ತಮ್ ಬ್ರೈನ್ ಓಡಿಸ್ತಿದ್ದಾರೆ. ಈ ರೀತಿ ಸ್ಮಾರ್ಟ್ ವರ್ಕ್ ಮಾಡಿ ಮೊಬೈಲ್ ಸ್ನಾಚಿಂಗ್ ಮಾಡ್ತಿದ್ದ ಖತರ್ನಾಕ್ ಆರೋಪಿಗಳನ್ನ ಕೋರಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ನಗರದ ಹಲವೆಡೆ ಮೊಬೈಲ್ ಕಳ್ಳತನ ಮಾಡ್ತಿದ್ದ ಇಬ್ಬರು ಖತರ್ನಾಕ್ ಮೊಬೈಲ್ ಕಳ್ಳರನ್ನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.  ಸಜ್ಜದ್ ಅರುಣ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರಿಂದ ಬರೋಬ್ಬರಿ 7ಲಕ್ಷ ಮೌಲ್ಯದ 40ಮೊಬೈಲ್ ಜಪ್ತಿ ಮಾಡಲಾಗಿದೆ. ಅಂದ್ಹಾಗೆ ನಗರದ ಲಿಂಗರಾಜಪುರಂ ಬಳಿ ಗ್ಯಾರೇಜ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಆರೋಪಿಗಳು ಅಲ್ಲಿ ರಿಪೇರಿಗೆ ಬರ್ತಿದ್ದಂತಹ ಬೈಕ್ ಗಳನ್ನ ತಗೊಂಡು ಫಿಲ್ಡಿಗಿಳೀತಿದ್ರು.. ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಹತ್ತಿದ್ದ ಆರೋಪಿಗಳು ಒಂಟಿಯಾಗಿ ಓಡಾಡೋರನ್ನ ಟಾರ್ಗೆಟ್ ಮಾಡಿ ಕ್ಷಣಮಾತ್ರದಲ್ಲೇ ಮೊಬೈಲ್ ಕದ್ದು ಎಸ್ಕೇಪ್ ಆಗ್ತಿದ್ರು.. ತಮ್ಮ ಬೈಕ್ ಬಳಸಿದ್ರೆ ಸಿಕ್ಕಿ ಬೀಳ್ತಿವಿ ಅಂತಾ ಗ್ಯಾರೇಜ್ ಗೆ ಬರ್ತಿದ್ದ ಬೈಕ್ ಗಳ ಮೂಲಕ ಆರೋಪಿಗಳು ಮೊಬೈಲ್ ಸ್ನ್ಯಾಚಿಂಗ್ ಮಾಡ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.

ಒಮ್ಮೆ ಮೊಬೈಲ್ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ ಆರೋಪಿಗಳು ಮತ್ತೆ ಸಿಕ್ಬಾರ್ದು ಅಂತಾ ಈ ಐಡಿಯಾ ಯೂಸ್ ಮಾಡಿದ್ರು. ಸೌತ್ ಈಸ್ಟ್ ಭಾಗದ ಕಡೆ ಆ್ಯಕ್ಟೀವ್ ಆಗಿದ್ದ ಆರೋಪಿಗಳು ಬೆಳ್ಳಂ ಬೆಳಗ್ಗೆ, ರಾತ್ರಿ ಟೈಮಲ್ಲಿ ಮೊಬೈಲ್ ಕಳ್ಳತನಕ್ಕಿಳೀತಿದ್ರು.. ಬೈಕ್ ಗಳ ಪರಿಶೀಲನೆ ಮಾಡಿ ಬೈಕ್ ಮಾಲೀಕರನ್ನ ವಿಚಾರಣೆ ಮಾಡಿದಾಗ ಗ್ಯಾರೇಜ್ ಟ್ಯಾಲೆಂಟೆಡ್ ಕಳ್ರು ಸಿಕ್ಕಿ ಬಿದ್ದಿದ್ದಾರೆ.ಸದ್ಯ ಸೌತ್ ಈಸ್ಟ್ ನಲ್ಲಿ‌ ಆ್ಯಕ್ಟೀವ್ ಆಗಿದ್ದ ಖತರ್ನಾಕ್ ಕಳ್ಳರನ್ನ‌ ಬಂಧಿಸಿರೋ ಪೊಲೀಸರು ಅವ್ರನ್ನ ತೀವ್ರ ತನಿಖೆ ನಡೆಸ್ತಿದ್ದಾರೆ.. ಇವ್ರ ಜೊತೆ ಇನ್ನೂ ಕೆಲ ಕುಖ್ಯಾತ ಕಳ್ಳರ ಕಾಂಟ್ಯಾಕ್ಟ್ ಇರೋ ಶಂಕೆ ಇದ್ದು ಹೆಚ್ಚಿನ  ತನಿಖೆ ಮುಂದುವರೆದಿದೆ.

ಸರ ಕಿತ್ತು ಓಡುತ್ತಿದ್ದವನ್ನು ಬೆನ್ನತ್ತಿ ಹಿಡಿದ ಸಾರ್ವಜನಿಕರು
ಚಳ್ಳಕೆರೆ: ಮೂರ್ನಾಲ್ಕು ತಿಂಗಳುಗಳಿಂದ ಗಾಂಧಿನಗರ, ತ್ಯಾಗರಾಜನಗರ, ಹಳೇಟೌನ್‌, ಹೌಸಿಂಗ್‌ ಬೋರ್ಡ್‌ ಕಾಲೋನಿ, ವಿಠಲನಗರ ಮುಂತಾದ ಕಡೆಗಳಲ್ಲಿ ಬೈಕ್‌ಲ್ಲಿ ಬಂದು ಮಹಿಳೆಯರು ಮಾಂಗಲ್ಯಸರ ಕಿತುಕೊಂಡು ಪರಾರಿಯಾಗುವ ಘಟನೆಗಳಲ್ಲಿ ಕಳ್ಳರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ಆದರೆ, ಗುರುವಾರ ಬೆಳಗ್ಗೆ 11ರ ಸಮಯದಲ್ಲಿ ಮದಕರಿ ನಗರದ ತಿಪ್ಪಮ್ಮ ತನ್ನ ಮನೆಯ ಮುಂದೆ ಕೆಲಸ ಮಾಡುವ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಸರಗಳ್ಳರು ಸರವನ್ನು ಕಿತ್ತು ಪರಾರಿಯಾಗುವ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲ ಜನ ಹಾಗೂ ಆ ಭಾಗದ ನಗರಸಭಾ ಸದಸ್ಯ ರಮೇಶ್‌ಗೌಡ ಮುಂತಾದ ಯುವಕರು ಸರಗಳ್ಳನ್ನು ಬೆನ್ನತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Crime News: ಸಂಬಂಧಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಅಮಾನತು

ಸುಮಾರು 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪೊಲೀಸರು ಕಳ್ಳನಿಂದ ವಶಕ್ಕೆ ಪಡಿದಿದ್ದು, ಇತರೆ ಪ್ರಕರಣಗಳ ಬಗ್ಗೆ ಆತನ ವಿಚಾರಣೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಕೈಗೆ ಸಿಕ್ಕ ಕಳ್ಳ ತನ್ನ ಮೊಬೈಲ್‌ನ್ನು ಬಿಸಾಕಿದ್ದು, ಇದನ್ನು ಗ್ರಹಿಸಿದ ಸಾರ್ವಜನಿಕರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆಂಧ್ರ ಪ್ರದೇಶದ ಗುಂತಕಲ್ಲಿನ ಅಬ್ಬುಆಲಿ(30) ಎಂದು ತಿಳಿದುಬಂದಿದೆ. 

COIMBATORE CAR BLAST: ಸಾವೀಗೀಡಾದ ಜಮೇಜಾ ಮುಬಿನ್ ಮನೆಯಲ್ಲಿ ಸ್ಪೋಟಕಗಳು ಪತ್ತೆ!

ಡಿವೈಎಸ್ಪಿ ರಮೇಶ್‌ಕುಮಾರ್‌ ಮಾರ್ಗದರ್ಶದನಲ್ಲಿ ಠಾಣಾ ಇನ್ಸ್‌ಪೆಕ್ಟರ್‌ ಉಮೇಶ್‌, ಪಿಎಸ್‌ಐಗಳಾದ ಕೆ.ಸತೀಶ್‌ನಾಯ್ಕ, ಎಂ.ಕೆ.ಬಸವರಾಜು, ಅಪರಾಧ ವಿಭಾಗದ ಸಿಬ್ಬಂದಿ ವಸಂತಕುಮಾರ್‌, ಸತೀಶ್‌, ಮಂಜುನಾಥ ಮುಡುಕೆ ಮುಂತಾದವರು ಆರೋಪಿಯ ವಿಚಾರಣೆಯಲ್ಲಿ ತೊಡಗಿದ್ದಾರೆ.

Follow Us:
Download App:
  • android
  • ios