ಮುತ್ತೂಟ್ ಫೈನಾನ್ಸ್ ಗೆ ನುಗ್ಗಿದ ಕಳ್ಳರು/ ಬರೋಬ್ಬರಿ 77 ಕೆಜಿ ಚಿನ್ನ ಕದ್ದು ಪರಾರಿ/ ಭದ್ರತಾ ವೈಫಲ್ಯವೇ ಘಟನೆಗೆ ಕಲಾಣವೇ? ಸೆಕ್ಯೂರಿಟಿ ಗಾರ್ಡ್ ವಶಕ್ಕೆ ಪಡೆದು ತನಿಖೆ

ಬೆಂಗಳೂರು(ಡಿ. 24) ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ನಲ್ಲಿ ಕಳ್ಳತನವಾಗಿದೆ. ನಗರದ ಫ್ರೇಜರ್ ಟೌನ್ ನಲ್ಲಿ ನಡೆದ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ತಡರಾತ್ರಿ ಗೋಡೆ ಕೊರೆದು ಕಳ್ಳತನ ಮಾಡಲಾಗಿದೆ. ಫ್ರೇಜರ್ ಟೌನ್ ಲ್ಲಿರುವ ಮೂತ್ತೂಟ್ ಪೈನಾನ್ಸ್ ನಲ್ಲಿ ಕಳ್ಳತನವಾಗಿದ್ದು 77 ಕೆಜಿ ಚಿನ್ನ ಕದ್ದು ಪರಾರಿಯಾಗಿದ್ದಾರೆ.

ಸುಮಾರು ಹತ್ತು ಜನರ ಗ್ಯಾಂಗ್ ನಿಂದ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ಗೋಡೆ ಕೊರೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಮುತ್ತೂಟ್ ಫೈ‌ನಾನ್ಸ್ ನಲ್ಲಿ ನೇಪಾಳ ಮೂಲದ ವ್ಯಕ್ತಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದು ಅವನ ಮೇಲೆ ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಳ್ಳಲಾಗಿದೆ.

ಖ್ಯಾತ ಟಿವಿ ನಿರೂಪಕಿ ಶವವಾಗಿ ಪತ್ತೆ

ಪುಲಕೇಶಿನಗರ ಪೊಲೀಸ್ ಠಾಣೆಗೆ ಪ್ರಕರಣ ಸಂಬಂಧ ಸೋಮವಾರ ದೂರು ದಾಖಲಿಸಲಾಗಿದೆ. ಮುತ್ತೂಟ್ ಫೈನಾನ್ಸ್ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಘಟನೆ ನೆಡೆದಾಗ ಭದ್ರಾತಾ ಸಿಬ್ಬಂದಿ ಇರಲಿಲ್ಲ. ಕಚೇರಿಯಲ್ಲಿನ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕಚೇರಿಯ ಬಾತ್ ರೂಮ್ ಗೋಡೆ ಕೊರೆದು ಚಿನ್ನಾಭರಣ ದರೋಡೆ ಮಾಡಿದ್ದಾರೆ. 16 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.