ಅಮೆರಿಕದಲ್ಲಿರುವ ಸಂಜಯ್‌ ಸಿಂಗ್‌ ಹೆಸರಿನಲ್ಲಿ ಮೊಬೈಲ್‌ಗೆ ಸಂದೇಶ| ಅನಾರೋಗ್ಯ ಸಮಸ್ಯೆಗೆ ಸಿಲುಕಿದ್ದೇನೆ. ಅದಷ್ಟು ಬೇಗ ಹಣ ಕಳುಹಿಸುವಂತೆ ಮನವಿ ಮಾಡಿದ್ದ ಖದೀಮರು| ಸಂದೇಶ ನೋಡಿ ಆತಂಕಗೊಂಡು ಕೂಡಲೇ ಗೆಳೆಯನ ಬ್ಯಾಂಕ್‌ ಖಾತೆಗೆ 7 ಲಕ್ಷ ಜಮೆ ಮಾಡಿದ್ದ ಉದ್ಯಮಿ| 

ಬೆಂಗಳೂರು(ಮೇ.02): ಅಮೆರಿಕದ ಗೆಳೆಯನ ಹೆಸರಿನಲ್ಲಿ ಮಾರತ್ತಹಳ್ಳಿಯ ಉದ್ಯಮಿಯೊಬ್ಬರಿಗೆ 7 ಲಕ್ಷ ಸೈಬರ್‌ ವಂಚಕರು ಟೋಪಿ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಅಮೆರಿಕದಲ್ಲಿರುವ ಉದ್ಯಮಿ ಸ್ನೇಹಿತ ಸಂಜಯ್‌ ಸಿಂಗ್‌ ಹೆಸರಿನಲ್ಲಿ ಮೊಬೈಲ್‌ಗೆ ಸಂದೇಶ ಬಂದಿತು. ಅನಾರೋಗ್ಯ ಸಮಸ್ಯೆಗೆ ಸಿಲುಕಿದ್ದೇನೆ. ಅದಷ್ಟು ಬೇಗ ಹಣ ಕಳುಹಿಸುವಂತೆ ಮನವಿ ಮಾಡಲಾಗಿತ್ತು. 

ಮೊಬೈಲ್‌ ಸಂಖ್ಯೆಯನ್ನೇ ಹ್ಯಾಕ್‌ ಮಾಡಿ 98 ಸಾವಿರ ಎಗರಿಸಿದ ವಂಚಕರು

ಈ ಸಂದೇಶ ನೋಡಿ ಆತಂಕಗೊಂಡ ಉದ್ಯಮಿ, ಕೂಡಲೇ ಗೆಳೆಯನ ಸಂದೇಶದಲ್ಲಿ ಬ್ಯಾಂಕ್‌ ಖಾತೆಗೆ 7 ಲಕ್ಷವನ್ನು ಜಮೆ ಮಾಡಿದ್ದಾರೆ. ಬಳಿಕ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ ಎಂದು ಸಿಇಎನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.