ಮಲೇಷಿಯಾದ ವ್ಯಕ್ತಿಯ ಮೊಬೈಲ್‌ ಸಂಖ್ಯೆ ಹ್ಯಾಕ್‌ ಮಾಡಿದ ಸೈಬರ್‌ ಕಳ್ಳರು| ಗೆಳಯನ ಹೆಸರಿನಲ್ಲಿ ವೈಟ್‌ಫೀಲ್ಡ್‌ನಲ್ಲಿದ್ದ ಫ್ರೆಂಡ್‌ಗೆ ತ್ವರಿತವಾಗಿ ಹಣ ಕಳುಹಿಸುವಂತೆ ಸಂದೇಶ ಕಳುಹಿಸಿದ್ದ ಖದೀಮರು| ಈ ಸಂಬಂಧ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಬೆಂಗಳೂರು(ಮೇ.02): ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂದು ಖಾಸಗಿ ಕಂಪನಿ ಉದ್ಯೋಗಿಗೆ ವಿದೇಶದಲ್ಲಿ ನೆಲೆಸಿರುವ ಅವರ ಬಾಲ್ಯ ಸ್ನೇಹಿತನ ಹೆಸರಿನಲ್ಲಿ ಸೈಬರ್‌ ವಂಚಕರು ಸಂದೇಶ ಕಳುಹಿಸಿ ಲಕ್ಷಾಂತರ ರುಪಾಯಿ ಹಣವನ್ನು ಪಡೆದುಕೊಂಡ ಪ್ರಕರಣ ವರದಿಯಾಗಿದೆ. ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಟ್‌ಫೀಲ್ಡ್‌ನಲ್ಲಿ ನೆಲೆಸಿರುವ ಖಾಸಗಿ ಕಂಪನಿ ಉದ್ಯೋಗಿಯ ಗೆಳೆಯನೊಬ್ಬ ಮಲೇಷಿಯಾದಲ್ಲಿ ನೆಲೆಸಿದ್ದಾನೆ. ಈ ಗೆಳೆಯರು ನಿರಂತರ ಸಂಪರ್ಕದಲ್ಲಿದ್ದು, ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಏ.29ರಂದು ಮಲೇಷಿಯಾದ ವ್ಯಕ್ತಿಯ ಮೊಬೈಲ್‌ ಸಂಖ್ಯೆ ಹ್ಯಾಕ್‌ ಮಾಡಿರುವ ಸೈಬರ್‌ ಕಳ್ಳರು, ಅವರ ಹೆಸರಿನಲ್ಲಿ ವೈಟ್‌ಫೀಲ್ಡ್‌ನಲ್ಲಿದ್ದ ಗೆಳೆಯನಿಗೆ ತ್ವರಿತವಾಗಿ ಹಣ ಕಳುಹಿಸುವಂತೆ ಸಂದೇಶ ಕಳುಹಿಸಿದ್ದಾರೆ. 

ಮುದ್ರಾ ಸಾಲ ಕೊಡಿಸುವ ನೆಪದಲ್ಲಿ 62 ಲಕ್ಷ ವಂಚನೆ

ಸ್ನೇಹಿತ ಸಂಕಷ್ಟದಲ್ಲಿರುವುದನ್ನು ಕಂಡು ಮರುಗಿದ ಅವರು, ಕೂಡಲೇ ಆ ಸಂದೇಶಕ್ಕೆ ಪ್ರತಿಕ್ರಿಯಿಸಿ 98 ಸಾವಿರ ವರ್ಗಾಯಿಸಿದ್ದಾರೆ. ಬಳಿಕ ಗೆಳೆಯನಿಗೆ ಕರೆ ಮಾಡಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.