ಬಸ್‌, ಟ್ಯಾಂಕರ್‌ ನಡುವೆ ಭೀಕರ ಅಪಘಾತ: 7 ಜನ ಸಾವು, 25 ಮಂದಿಗೆ ಗಾಯ

 ಬಸ್ಸೊಂದು ಗ್ಯಾಸ್​ ಟ್ಯಾಂಕರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದರೆ, ಸುಮಾರು 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

7 Dead, 25 Injured As Bus Collides With Gas Tanker In Uttar Pradesh rbj

ಸಂಭಾಲ್ (ಉತ್ತರ ಪ್ರದೇಶ), (ಡಿ.16): ಉತ್ತರ ಪ್ರದೇಶದ‌ಲ್ಲಿ ಬಸ್‌ ಮತ್ತು ಗ್ಯಾಸ್‌ ಟ್ಯಾಂಕರ್‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ. 

ಧನಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂದು (ಬುಧವಾರ) ಈ ಘಟನೆ ನಡೆದಿದ್ದು, ಮಂಜು ಕವಿದ ವಾತಾವರಣವಿದ್ದರಿಂದ ರಸ್ತೆ ಸಂಪೂರ್ಣವಾಗಿ ಕಾಣದೆ ಈ ಅಪಘಾತ ಸಂಭವಿಸಿದೆ ತಿಳಿದುಬಂದಿದೆ.

ಪಾರ್ಟಿ‌ ಮಾಡೋಣ ಬಾ.. ನಂಬಿ ಬಂದ ಆಕೆಗೆ ಮಾಡಬಾರದನ್ನ ಮಾಡಿದ ಕಾಮುಕ ಸ್ನೇಹಿತರು

ಆಗ್ರಾ-ಮುರಾದಾಬಾದ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಚಕ್ರೇಶ್‌ ಮಿಶ್ರಾ ಅವರು ಮಾಹಿತಿ ನೀಡಿದರು.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios