ದಾವಣಗೆರೆ: ಡ್ರಗ್ಸ್, ಹುಲಿ ಉಗುರು ಮಾರುತ್ತಿದ್ದ ಬೆಂಗಳೂರಿನ ಇಬ್ಬರು ಸೇರಿ 7 ಸೆರೆ
ದಾವಣಗೆರೆ ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್‌ಎಚ್ 48 ಸರ್ವೀಸ್ ರಸ್ತೆ ಕಡೆಯಿಂದ ಮಯೂರ ಗ್ಲೋಬಲ್ ಶಾಲೆ ಕಡೆಗೆ ಹೋಗುವ ಮಾರ್ಗದಲ್ಲಿ ಮಾದಕ ವಸ್ತು ಮಾರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು
ದಾವಣಗೆರೆ(ಡಿ.09): ಎಂಡಿಎಂಎ ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಬೆಂಗಳೂರಿ ಇಬ್ಬರು ಸೇರಿ 7 ಮಂದಿ ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹7.20 ಲಕ್ಷ ಮೌಲ್ಯದ 40 ಗ್ರಾಂ ಎಂಡಿಎಂಎ ಮಾದಕ ವಸ್ತು, 6 ಹುಲಿ ಉಗುರುಗಳು ಹಾಗೂ ಒಂದು ಕಾರನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸರು ಜಪ್ತಿ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೆರೆಯಾಗಲ ಚಿಕ್ಕೇನಹಳ್ಳಿಯ ಮೂಲದ, ಹಾಲಿ ದಾವಣಗೆರೆ ಬಾಲಾಜಿ ನಗರದ ಷೇರು ಮಾರ್ಕೆಟ್ ಟ್ರೇಡಿಂಗ್‌ನ ಎಸ್.ಅಶೋಕ ಕುಮಾರ(27 ವರ್ಷ), ಆರ್‌ಎಂಸಿ ಲಿಂಕ್ ರಸ್ತೆಯ ವಾಸಿ, ಮೂಲತಃ ರಾಜಸ್ಥಾನದ ಬಾಲೋತ್ರ ಜಿಲ್ಲೆಯ ರಮೇಶ ಕುಮಾರ ಗಾಂಸಿ(39), ಆರ್‌ಎಂಸಿ ಲಿಂಕ್ ರಸ್ತೆಯ ಎಂ.ಆರ್.ಲೋಕೇಶ(40), ವಿನೋಬನಗರ ಕಾರು ಚಾಲಕ ಕಾರ್ತಿಕ್(32), ನಿಜಲಿಂಗಪ್ಪ ಬಡಾವಣೆಯ ಕಾರ್ಪೆಂಟರ್ ರಾಮರತನ್ ಅಲಿಯಾಸ್ ನೌರತನ್(34), ರಾಜಸ್ಥಾನದ ಸ್ಯಾಂಚೋರು ಜಿಲ್ಲೆ, ಹಾಲಿ ಬೆಂಗಳೂರು ಬಸವೇಶ್ವರ ಬಡಾವಣೆ ವಾಸಿ ಸ್ಟೀಲ್ ರೀಲಿಂಗ್ ಕೆಲಸಗಾರ ಸುನಿಲಕುಮಾರ(28), ಅದೇ ರಾಜ್ಯದವನಾದ ಬೆಂಗಳೂರು ಕೊಡಿಗೆಹಳ್ಳಿ ಸ್ಟ್ರೀಲ್ ಸ್ಕ್ರ್ಯಾಪ್ ವ್ಯಾಪಾರಿ ಅಶೋಕಕುಮಾರ(23) ಬಂಧಿತ ಆರೋಪಿಗಳು.
ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ
ದಾವಣಗೆರೆ ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್‌ಎಚ್ 48 ಸರ್ವೀಸ್ ರಸ್ತೆ ಕಡೆಯಿಂದ ಮಯೂರ ಗ್ಲೋಬಲ್ ಶಾಲೆ ಕಡೆಗೆ ಹೋಗುವ ಮಾರ್ಗದಲ್ಲಿ ಮಾದಕ ವಸ್ತು ಮಾರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬನನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡು, ಆರೋಪಿತನ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆ 2ನೇ ಹಂತ, 4ನೇ ಮುಖ್ಯರಸ್ತೆ, 5ನೇ ತಿರುವಿನ ಮನೆಯ ಮೇಲೆ ಶೋಧನಾ ವಾರೆಂಟ್ ಪಡೆದು, ದಾಳಿ ಮಾಡಿದ್ದರು.
ಬೆಂಗಳೂರಿನ ಮನೆಯಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಎಂಡಿಎಂಎ ಮತ್ತು 6 ಹುಲಿ ಉಗುರು ಹಾಗೂ 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.