ಮಂಡ್ಯ: ಮಳವಳ್ಳಿಯಲ್ಲಿ ಮತ್ತೊಂದು ರೇಪ್: SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ವೃದ್ಧ
Malavalli Rape Case: 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವ ದಾರುಣ ಘಟನೆ ಹಸಿಯಾಗಿರುವಗಾಲೇ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ
ಮಂಡ್ಯ (ಅ. 14): 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವ ದಾರುಣ ಘಟನೆ ಹಸಿಯಾಗಿರುವಗಾಲೇ ಮಂಡ್ಯ (Mandya) ಜಿಲ್ಲೆ ಮಳವಳ್ಳಿಯಲ್ಲಿ (Malavalli) ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 60 ವರ್ಷದ ವೃದ್ಧ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 6 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಂದೆ ಇಲ್ಲದ ಕಾರಣ ಮಗಳನ್ನು ಅಜ್ಜಿ–ತಾತನ ಮನೆಯಲ್ಲಿ ಬಿಟ್ಟು ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 6ರಂದು ಅಜ್ಜಿ ಜೊತೆ ಜಗಳವಾಡಿಕೊಂಡು ಬಾಲಕಿ ಮನೆ ಬಿಟ್ಟಿದ್ದಳು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ವೃದ್ಧ ಬಾಲಕಿಗೆ ಊಟ, ತಿಂಡಿ ಕೊಡಿಸಿ ಬಸವನಬೆಟ್ಟದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 7 ರಂದು ವಾಪಸ್ ಕರೆತಂದು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ. ನಂತರ ಅಜ್ಜಿ ಮನೆಗೆ ಬಾಲಕಿಯನ್ನು ತಂದು ಬಿಟ್ಟಿದ್ದಾನೆ.
ಆಕೆಯನ್ನು ಅಜ್ಜಿ ವಿಚಾರಿಸಿದಾಗ ಬಾಲಕಿ ಘಟನ ವಿವರಿಸಿದ್ದಾಳೆ. ಅಕ್ಟೋಬರ್ 8ರಂದು ಬಾಲಕಿಯ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ. ಹಲಗೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ಮುಂದುವರೆದಿದೆ.
Crime News: ಮದ್ಯದಲ್ಲಿ ಮತ್ತು ಬರುವ ಔಷಧಿ ಹಾಕಿ ಮಹಿಳೆಯ ಅತ್ಯಾಚಾರ: ಮೂವರ ಬಂಧನ
10ರ ಬಾಲಕಿ ರೇಪ್: ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿ ಶವವನ್ನು ನೀರಿನ ಸಂಪ್‌ಗೆ ಎಸೆದಿರುವ ಘಟನೆ ಮಳವಳ್ಳಿಯಲ್ಲಿ ನಡೆದಿದೆ. ಟ್ಯೂಷನ್ ಸೆಂಟರ್‌ನಲ್ಲಿ ಮೇಲ್ವಿಚಾರಕನಾಗಿದ್ದ ಕಾಂತರಾಜು ಎಂಬಾತ ಅತ್ಯಾಚಾರವೆಸಗಿದ ಆರೋಪಿಯಾಗಿದ್ದು ಈತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮಳವಳ್ಳಿಯಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಶಾಲೆಗೆ ದಸರಾ ರಜೆ ಇದ್ದ ಕಾರಣ ಜ್ಞಾನ ಕುಠೀರದ ಟ್ಯೂಷನ್‌ಗೆ ಬಾಲಕಿ ನಿತ್ಯ ಸಂಜೆ ವೇಳೆ ತೆರಳುತ್ತಿದ್ದಳು. ಆದರೆ, ಆರೋಪಿ ಕಾಂತರಾಜು ಮಂಗಳವಾರ ಸಂಜೆ ಬಾಲಕಿ ಟ್ಯೂಷನ್ ಬಗ್ಗೆ ವಿಚಾರಿಸಿದಾಗ ಬೆಳಗ್ಗೆಯೇ ಟ್ಯೂಷನ್ ಇರುವುದಾಗಿ ಹೇಳಿಕೆ ಕರೆಸಿಕೊಂಡು ಚಾಕೋಲೆಟ್ ಆಸೆ ತೋರಿಸಿ ಅತ್ಯಾಚಾರಗೈದು ನಂತರ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಪಟ್ಟಣದ ಮೈಸೂರು ರಸ್ತೆ ಜ್ಞಾನ ಕುಠೀರ ಸೆಂಟರ್‌ಗೆ ಟ್ಯೂಷನ್‌ಗೆ ಬಂದ ಬಾಲಕಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದ್ದರು. ಸಂಜೆಯಾಗುತ್ತಿದ್ದಂತೆ ದಿವ್ಯಾ ಶವವಾಗಿ ಪತ್ತೆಯಾದರು. ಈ ಬಗ್ಗೆ ತನಿಖೆ ನಡೆಸಿದಾಗ ಮೊಬೈಲ್ ಕಾಲ್ ರೆಕಾರ್ಡ್‌ನಲ್ಲಿ ಕಾಂತರಾಜು ಬಾಲಕಿಯನ್ನು ಕರೆಸಿಕೊಂಡಿರುವುದು ಪತ್ತೆಯಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡ.