Raichur: ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ 5ನೇ ತರಗತಿ ವಿದ್ಯಾರ್ಥಿ ಸಾವು!
ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾ. ಗಬ್ಬೂರು ಗ್ರಾಮದಲ್ಲಿ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃತ ಬಾಲಕ.
ರಾಯಚೂರು (ಸೆ.20): ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾ. ಗಬ್ಬೂರು ಗ್ರಾಮದಲ್ಲಿ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃತ ಬಾಲಕ. ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ವಿದ್ಯಾರ್ಥಿ ಶಿವಪ್ರಸಾದ್ ವಕೀಲ ಶಿವಣ್ಣ ಎಂಬುವವರ ಪುತ್ರ. ಗಬ್ಬೂರ್‌ನಲ್ಲಿ ಸೈನಿಕ, ನವೋದಯ ಕೋಚಿಂಗ್ ಪಡೆಯುತ್ತಿದ್ದ. ಇನ್ನು ಕೋಚಿಂಗ್ ಸೆಂಟರ್‌ನಲ್ಲೇ ಏಕಾಏಕಿ ಲೋ ಬಿಪಿಯಾಗಿ ಬಾಲಕ ಶಿವಪ್ರಸಾದ್ ಸಾವನಪ್ಪಿದ್ದು, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಾಕ್ ವೇಳೆ ಕುಸಿದು ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವು: ಶಿವಮೊಗ್ಗ ನಗರದ ಸರ್ಕಿಟ್ ಹೌಸ್ ಬಳಿ ವಾಕಿಂಗ್ ಮಾಡುವಾಗ ದಿಢೀರ್ ಕುಸಿದು ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಶರಾವತಿ ನಗರದ ನಿವಾಸಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಪೃಥ್ವಿರಾಜ್ (21) ಮೃತಪಟ್ಟ ವಿದ್ಯಾರ್ಥಿ. ಈತ ಪ್ರವಾಸಿ ಮಂದಿರದ ಬಳಿ ಬುಧವಾರ ಸಂಜೆ ವಾಕ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.ಕೂಡಲೇ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ದಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 35.84 ಲಕ್ಷ ಪ್ರಕರಣಗಳ ಇತ್ಯರ್ಥ: ನ್ಯಾ.ವಿ.ಕಾಮೇಶ್ವರ್ ರಾವ್
ಈ ವೇಳೆಗಾಗಲೇ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಪೃಥ್ವಿರಾಜ್ ಸಿಮ್ಸ್ ಕಾಲೇಜಿನಲ್ಲಿ ಎರಡನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಪ್ರತಿ ದಿನ ಪ್ರವಾಸಿ ಮಂದಿರದ ಬಳಿ ವಾಕ್ ಮಾಡುತ್ತಿದ್ದರು. ಇವರು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯ, ಕಾಮಧೇನು ಔಷಧ ಸಗಟು ವ್ಯಾಪಾರಿ ಮುತ್ತಣ್ಣ ಅವರ ದ್ವಿತೀಯ ಪುತ್ರ. ಇವರ ನಿಧನಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂತಾಪ ಸೂಚಿಸಿದೆ.