ಮಂಗ​ಳೂರು ಏರ್ಪೋ​ರ್ಟಲ್ಲಿ ಚಿನ್ನ ಸಾಗಣೆ ವೇಳೆ ಸಿಕ್ಕಿ ಬಿದ್ದ ಆರೋ​ಪಿ​ಗ​ಳು| ಚಿನ್ನವನ್ನು ಪೌಚ್‌ ರೂಪದಲ್ಲಿ ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನ| ಎರಡೂ ಪ್ರಕರಣಗಳಲ್ಲಿ ಚಿನ್ನದ ಪುಡಿ ಗಮ್‌ ಜತೆ ಮಿಶ್ರಣ ಮಾಡಿ ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಮತ್ತು ಪೌಚ್‌ನಲ್ಲಿ ತುಂಬಿಸಿರುವುದು ಪತ್ತೆ| 

ಮಂಗಳೂರು(ಫೆ.19): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಹಾಗೂ ಪುರುಷನೊಬ್ಬ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಣೆ ಮಾಡು​ತ್ತಿ​ದ್ದು​ದನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಬರೊಬ್ಬರಿ 1.108 ಕೆ.ಜಿಯ 53.51 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ವಿದೇಶದಿಂದ ವಿಮಾನದಲ್ಲಿ ಆಗಮಿಸಿದ ಮಹಿಳೆ ಕಾಸರಗೋಡಿನ ಕೋಟಚ್ಚೇರಿಯ ಫಾತಿಮಾ (47) ಎಂಬಾಕೆ .38.88 ಲಕ್ಷ ಮೌಲ್ಯದ 805 ಗ್ರಾಂ ಚಿನ್ನವನ್ನು ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಅಡಗಿಸಿಟ್ಟಿದ್ದಳು ಹಾಗೂ ಭಟ್ಕಳದ ಮೊಹಮ್ಮದ್‌ ಮೊಹಿದ್ದೀನ್‌ (50) ಎಂಬಾತ 14.63 ಮೌಲ್ಯದ 303 ಗ್ರಾಂ. ಚಿನ್ನವನ್ನು ಪೌಚ್‌ ರೂಪದಲ್ಲಿ ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನಿಸಿದ್ದ. ತಪಾಸಣೆಯ ಸಂದರ್ಭ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಎರಡೂ ಪ್ರಕರಣಗಳಲ್ಲಿ ಚಿನ್ನದ ಪುಡಿಯನ್ನು ಗಮ್‌ ಜತೆ ಮಿಶ್ರಣ ಮಾಡಿ ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಮತ್ತು ಪೌಚ್‌ನಲ್ಲಿ ತುಂಬಿಸಿರುವುದೂ ಪತ್ತೆಯಾಗಿದೆ.

3 ದಿನ ಹೆಂಡ್ತಿ ಜತೆ.. 3 ದಿನ ಗೆಳತಿ ಜತೆ.. ಒಂದು ದಿನ ವೀಕ್ ಆಫ್, ಎಂಥಾ ನ್ಯಾಯ!

ಕಸ್ಟಮ್ಸ್‌ ಡೆಪ್ಯುಟಿ ಕಮಿಷನರ್‌ ಅವಿನಾಶ್‌ ಕಿರಣ್‌ ರೊಂಗಾಲಿ ನೇತೃತ್ವದಲ್ಲಿ ಸೂಪರಿಂಟೆಂಡೆಂಟ್‌ ಮನೋ ಕಾತ್ಯಾಯಿನಿ ಮತ್ತು ಬಿಕ್ರಂ ಚಕ್ರಬೊರ್ತಿ ಹಾಗೂ ಇತರ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.