Asianet Suvarna News Asianet Suvarna News

ಬೆಂಗಳೂರು: 5 ಜನ ವಾಹನ ಕಳ್ಳರ ಸೆರೆ: ₹55 ಲಕ್ಷ ಮೌಲ್ಯದ 51 ಬೈಕ್‌ ಜಪ್ತಿ!

ವಾಹನ ಕಳ್ಳರ ಮೇಲೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಐದು ಮಂದಿಯನ್ನು ಸೆರೆ ಹಿಡಿದು 55 ಲಕ್ಷ ರು. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ

5 vehicle thieves arrested: 51 bikes worth 55 lakh seized at bengaluru rav
Author
First Published Jan 24, 2024, 6:45 AM IST

ಬೆಂಗಳೂರು (ಜ.24) : ವಾಹನ ಕಳ್ಳರ ಮೇಲೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಐದು ಮಂದಿಯನ್ನು ಸೆರೆ ಹಿಡಿದು 55 ಲಕ್ಷ ರು. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಆನೇಕಲ್‌ ತಾಲೂಕು ದೊಮ್ಮಸಂದ್ರದ ದಿಲೀಪ್‌, ಚಿನ್ನಪ್ಪನಹಳ್ಳಿಯ ರಿಯನ್, ಮೊಹಮ್ಮದ್‌ ತೈರುಲ್ಲಾ, ಆಂಧ್ರಪ್ರದೇಶದ ಶಬಾನ್‌ ಹಾಗೂ ಅರ್ಬಾಜ್‌ ಬಂಧಿತರಾಗಿದ್ದು, ಆರೋಪಿಗಳಿಂದ 55 ಲಕ್ಷ ರು. ಮೌಲ್ಯದ 51 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಸಂತೋಷ್ ರೆಡ್ಡಿ ಅಲಿಯಾಸ್ ಪೂರಿ ಪತ್ತೆಗೆ ತನಿಖೆ ನಡೆದಿದೆ. ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ರಾತ್ರಿ ವೇಳೆ ಕಳವು ಮಾಡಿ ಬಳಿಕ ಆರೋಪಿಗಳು ಮಾರುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾಣೇಕೊಪ್ಪ ನೇತೃತ್ವದಲ್ಲಿ ಮಾರತ್ತಹಳ್ಳಿ, ವೈಟ್‌ಫೀಲ್ಡ್ ಹಾಗೂ ವರ್ತೂರು ಠಾಣೆಗಳ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಹ್ಯಾಂಡಲ್‌ ಲಾಕ್‌ ಮುರಿದು ಬೈಕ್‌ಗಳ ಕಳವು: ಇಬ್ಬರು ಆರೋಪಿಗಳ ಬಂಧನ

ನೇಪಾಳಿ ಗ್ಯಾಂಗ್‌ಗೆ ಪೂರಿ ಕ್ಯಾಪ್ಟನ್‌

ನೇಪಾಳ ಮೂಲದ ರಿಯನ್‌, ಹಲವು ದಿನಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ. ಬಳಿಕ ಚಿನ್ನಪ್ಪನಹಳ್ಳಿಯಲ್ಲಿ ನೆಲೆಸಿದ್ದ ಆತನಿಗೆ ಕುಖ್ಯಾತ ವಾಹನ ಕಳ್ಳ ಸಂತೋಷ ಅಲಿಯಾಸ್ ಪೂರಿ ಪರಿಚಯವಾಗಿದೆ. ಈ ಸ್ನೇಹದಲ್ಲಿ ಪೂರಿ ಜತೆ ಸೇರಿ ಆತ ಸಹ ವಾಹನ ಕಳ್ಳತನದಲ್ಲಿ ನಿರತನಾಗಿದ್ದ. ಈಗ ಪೂರಿ ಸಹಚರಾದ ರಿಯನ್ ಹಾಗೂ ದಿಲೀಪ್ ಸಿಕ್ಕಿಬಿದ್ದಿದ್ದು, ಈ ಆರೋಪಿಗಳಿಂದ 15 ಲಕ್ಷ ರು. ಮೌಲ್ಯದ 24 ವಾಹನಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

 

ಬೆಂಗಳೂರು: ಮೊಬೈಲ್‌ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!

Follow Us:
Download App:
  • android
  • ios