Asianet Suvarna News Asianet Suvarna News

ಕೊಪ್ಪಳ: ಪತಿಗೆ ಥಳಿಸಿ ವಿವಾಹಿತ ಮಹಿಳೆಯನ್ನ ಎಳೆದೊಯ್ದು ಅತ್ಯಾಚಾರ ನಡೆಸಿದ್ದ ಗ್ಯಾಂಗ್ ಅರೆಸ್ಟ್

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಆಕೆಯ ಪತಿಗೆ ಆರು ಮಂದಿ ಥಳಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

5 arrested in Koppal after gang intervenes between quarrelling couple wife raped rav
Author
First Published Feb 12, 2024, 8:35 PM IST

ಕೊಪ್ಪಳ (ಫೆ.12): ವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಆಕೆಯ ಪತಿಗೆ ಆರು ಮಂದಿ ಥಳಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 8 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಸ್ ನಿಲ್ದಾಣ ಬಳಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಸಂತ್ರಸ್ತೆ ಮತ್ತು ಆಕೆಯ ಪತಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿಲ್ದಾಣದಲ್ಲಿ ಜಗಳವಾಡುತ್ತಿದ್ದರು ಮತ್ತು ಜಗಳ ತೀವ್ರವಾಗುತ್ತಿದ್ದಂತೆ, ಆರು ಜನ ಮಧ್ಯಪ್ರವೇಶಿಸಿ ಸಂತ್ರಸ್ತೆಯ ಪತಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರೇಪ್‌ ಯಾಕೆ ಆಗುತ್ತೆ? ಸದ್ಗುರು ಏನ್ ಹೇಳ್ತಾರೆ ಕೇಳಿ!

ಆಕೆಯ ಪತಿಯನ್ನು ಥಳಿಸಿದ್ದು, ಆರೋಪಿಗಳಲ್ಲಿ ಒಬ್ಬನಾದ ಲಿಂಗರಾಜ ಮಹಿಳೆಯನ್ನು ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಗಂಗಾವತಿ ಪೊಲೀಸ್ ಉಪಾಧೀಕ್ಷಕ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಹೇಳಿದ್ದಾರೆ.

"ಅತ್ಯಾಚಾರದ ನಂತರ, ಗ್ಯಾಂಗ್ ಸಂತ್ರಸ್ತೆಯನ್ನು ನಿಂದಿಸಿ ಕಿರುಕುಳ ನೀಡಿದೆ" ಎಂದು ಡಿಸಿಪಿ ತಿಳಿಸಿದ್ದಾರೆ.

ಅಂಕೋಲಾ: ಮೈದುನ ಮೇಲೆ ಮಾನಭಂಗ ಆರೋಪ, ದೂರು

ಆರೋಪಿಗಳಾದ ಲಿಂಗರಾಜ, ಮೌಲಾ ಹುಸೇನ್, ಶಿವಕುಮಾರ್ ಸ್ವಾಮಿ, ಪ್ರಶಾಂತ, ಮಹೇಶ್ ಮತ್ತು ಮಾದೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios