3 ಎಕರೆ ಜಮೀನು ಹೊಂದಿದ್ದ ಪಾಂಡಪ್ಪ ಬ್ಯಾಂಕ್‌ನಲ್ಲಿ 1 ಲಕ್ಷ ರು. ಜತೆಗೆ ಕೈ ಸಾಲ ಮಾಡಿದ್ದರು. ಮಳೆಯಿಂದ ತೊಗರಿ ಬೆಳೆ ನಷ್ಟವಾಗಿತ್ತು. ಈ ನಡುವೆ ಸಾಲ ತೀರಿಸಲು ವಕೀಲರ ಮೂಲಕ 2 ಬಾರಿ ಬ್ಯಾಂಕ್ ನೋಟಿಸ್ ಕಳುಹಿಸಿತ್ತು.  

ಕಲಬುರಗಿ(ಸೆ.28): ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿಯ ಪೋತಂಗಲ್‌ನಲ್ಲಿ ನಡೆದಿದೆ. ಪಾಂಡಪ್ಪ ತಿಪ್ಪಣ್ಣ ಕೊರವರ್ (45) ಮೃತ. 

3 ಎಕರೆ ಜಮೀನು ಹೊಂದಿದ್ದ ಪಾಂಡಪ್ಪ ಬ್ಯಾಂಕ್‌ನಲ್ಲಿ 1 ಲಕ್ಷ ರು. ಜತೆಗೆ ಕೈ ಸಾಲ ಮಾಡಿದ್ದರು. ಮಳೆಯಿಂದ ತೊಗರಿ ಬೆಳೆ ನಷ್ಟವಾಗಿತ್ತು. ಈ ನಡುವೆ ಸಾಲ ತೀರಿಸಲು ವಕೀಲರ ಮೂಲಕ 2 ಬಾರಿ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಹೀಗಾಗಿ ತಮ್ಮ ಬಳಿಯಿದ್ದ ಎತ್ತುಗಳನ್ನು ಮಾರಾಟಕ್ಕೆ ಮುಂದಾದಾಗ ಕುಟುಂಬಸ್ಥರು ವಿರೋಧಿಸಿದ್ದರು.

ಹೆಂಡ್ತಿ ಕಾಟ ತಡ್ಯೋಕ್ ಆಗ್ತಿಲ್ಲ, ನೊಂದ ಪುರುಷರ ಗೋಳು ಕೇಳೋರಿಲ್ಲ!

ಇದರಿಂದ ಬೇಸತ್ತು ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡಿದ್ದು, ಶೇ.80ರಷ್ಟು ದೇಹ ಸುಟ್ಟಿತ್ತು. ಆಸತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.