ಚೂಯಿಂಗ್ ಗಮ್ ನುಂಗಿ ನಾಲ್ಕು ವರ್ಷದ ಮಗು ಸಾವು!
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ದುರಂತ ಘಟನೆಯಲ್ಲಿ, ನಾಲ್ಕು ವರ್ಷದ ಮಗುವೊಂದು ಅಂಗಡಿಯಿಂದ ಖರೀದಿಸಿದ ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.
ನವದೆಹಲಿ (ನ.4): ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ದುರಂತ ಘಟನೆಯಲ್ಲಿ, ನಾಲ್ಕು ವರ್ಷದ ಮಗುವೊಂದು ಅಂಗಡಿಯಿಂದ ಖರೀದಿಸಿದ ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ರಾಹುಲ್ ಕಶ್ಯಪ್ ಅವರ ಮಗ ಎಂದು ಗುರುತಿಸಲಾದ ಮಗು ಭಾನುವಾರ ಸಂಜೆ ಚೂಯಿಂಗ್ ಗಮ್ ಖರೀದಿಸಿತ್ತು ಎಂದು ವರದಿಯಾಗಿದೆ. ಅದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಚೂಯಿಂಗ್ ಗಮ್ ಅವನ ಗಂಟಲಿನಲ್ಲಿ ಸಿಲುಕಿಕೊಂಡು, ಉಸಿರಾಟದ ತೊಂದರೆಗೆ ಕಾರಣವಾಯಿತು. ಕುಟುಂಬ ಸದಸ್ಯರು ಚೂಯಿಂಗ್ ಗಮ್ ಅನ್ನು ತೆಗೆಯಲು ಹರಸಾಹಸ ಪಟ್ಟರು, ಆದರೆ ಅದು ಸಿಲುಕಿಕೊಂಡಿತ್ತು. ತಕ್ಷಣವೇ ಹುಡುಗನನ್ನು ಕಾನ್ಪುರದ ಅತಿದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಯತ್ನಗಳ ಹೊರತಾಗಿಯೂ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯನ್ನು ವಿವರಿಸಿರುವ, ರಾಹುಲ್ ಕಶ್ಯಪ್ ತನ್ನ ಮಗ ಚೂಯಿಂಗ್ ಗಮ್ ಬೇಕು ಎಂದು ಹಠ ಮಾಡುತ್ತಿದ್ದ. ಸಂಜೆ 7 ಗಂಟೆ ಸುಮಾರಿಗೆ ಆತನಿಗೆ ನೀಡಿದ ಬಳಿಕ ಅದನ್ನು ತೆಗೆದು ತಿನ್ನಲು ಆರಂಭಿಸಿದ್ದ ಎಂದಿದ್ದಾರೆ. ಪರಿಸ್ಥಿತಿ ಇಷ್ಟು ಕೈಮೀರಬಹುದು ಎಂದು ಅಂದಾಜಿರಲಿಲ್ಲ. ಆದರೆ, ಆತನ ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡಾಗ ಪರಿಸ್ಥಿತಿ ವೇಗವಾಗಿ ಹದಗೆಟ್ಟಿತು.
ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಮೊದಲ ಜಾಬ್ ಏನಾಗಿತ್ತು? ಇಲ್ಲಿದೆ ಡೀಟೇಲ್ಸ್..
ಚೂಯಿಂಗ್ ಗಮ್ ತಯಾರಿಸಿದ ಕಂಪನಿಯನ್ನು ಅವರು ಟೀಕೆ ಮಾಡಿದ್ದು, ತಯಾರಕ ಪರಿ ಜೈನ್ ಟಾಫಿ ಕಂಪನಿಯ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಲು ಯೋಜಿಸುತ್ತಿದ್ದೇನೆ ಎಂದು ಕಶ್ಯಪ್ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.ಈ ಹೃದಯ ವಿದ್ರಾವಕ ಘಟನೆಯು ಪ್ರದೇಶದಲ್ಲಿ ಇದೇ ರೀತಿಯ ಮಿಠಾಯಿ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಭಯವನ್ನು ಹುಟ್ಟುಹಾಕಿದೆ.
PPF ಯೋಜನೆ: ನೀವು ಹೂಡುವ 10 ಸಾವಿರ 82 ಲಕ್ಷ ರೂಪಾಯಿ ಆಗುತ್ತದೆ!