ಪಂಚರತ್ನ ರಥಯಾತ್ರೆಯ ಹಳಸಿದ ಅನ್ನ ತಿಂದು 15ಕ್ಕೂ ಹೆಚ್ಚು ಜಾನುವಾರು ಸಾವು!

ಹಳಸಿದ ಅನ್ನ ತಿಂದು ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ಧಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಶನಿವಾರ ನಡೆದಿದೆ.

Poisoned feed kills more than 15 cattle in pancharatna rathayatre convention at yadgir rav

ಯಾದಗಿರಿ (ಮಾ.26) : ಹಳಸಿದ ಅನ್ನ ತಿಂದು ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ಧಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಯರಗೋಳ(Yaragola village) ಹೊರವಲಯದಲ್ಲಿ ಮೊನ್ನೆಯಷ್ಟೇ ನಡೆದಿದ್ದ ಜೆಡಿಎಸ್‌ ಪಂಚರತ್ನ ಯಾತ್ರೆ(JDS Pancharatna rathayatre)ಯ ಅಂಗವಾಗಿ ನಡೆದಿದ್ದ ಸಮಾವೇಶದ ನಂತರ ಉಳಿದ ಅನ್ನ ಆಹಾರ ಅಲ್ಲಿ ಹೊಲವೊಂದರ ಬಳಿ ಬಿಸಾಡಿರುವ ಕಾರ್ಯಕ್ರಮದ ಆಯೋಜಕರು. ಗುರುಮಠಕಲ್‌ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್(Sharanagowda kanddakur) ಆಯೋಜನೆ ಮಾಡಿದ್ದ ಕಾರ್ಯಕ್ರಮ. ಎರಡು ದಿನಗಳ ನಂತರ ವಿಷಪೂರಿತಗೊಂಡ ಈ ಅನ್ನಾಹಾರ ಸೇವಿಸಿದ ಜಾನುವಾರುಗಳು ಹೊಟ್ಟೆಯುಬ್ಬಿಕೊಂಡು ಮೃತಪಟ್ಟಿವೆ. 

ಕರ್ನಾಟಕದಲ್ಲಿ ಅಕಾಲಿಕ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ಸಮಾವೇಶದ ನಂತರ ಉಳಿದ ಅನ್ನಾಹಾರದ ವಿಲೇವಾರಿಗೊಳಿಸಲು ನಿರ್ವಹಣೆ ಹೊತ್ತಿದ್ದ ತಂಡ ನಿರ್ಲಕ್ಷ್ಯವೇ ಜಾನುವಾರುಗಳ ಸಾವಿಗೆ ಕಾರಣ.ಎಂಬ ಆರೋಪಗಳು ಕೃಷಿ ಕೂಲಿಕಾರ್ಮಿರರ ಸಂಘಟನೆ ಮಾಡಿದೆ.

ಮಾಹಿತಿ ಅರಿಯುತ್ತಲೇ ಅಲ್ಲಿಗೆ ಭೇಟಿ ನೀಡಿದ ಪಶು ವೈದ್ಯರ ತಂಡ, ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದೆ. ಅಸ್ವಸ್ಥಗೊಂಡ ಇನ್ನೂ 10ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರ್ಘಟನೆ ಅರಿಯುತ್ತಲೇ ತೀವ್ರ ಆಘಾತ ವ್ಯಕ್ತಪಡಿಸಿದ ಜೆಡಿಎಸ್‌ ನಾಯಕ ಶರಣಗೌಡ ಕಂದಕೂರ, ಮೃತಪಟ್ಟು ಜಾನುವಾರುಗಳ ರೈತರ ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ಜಾನುವಾರುಗಳ ಮಾಲೀಕರುಗಳಿಗೆ ಧನಸಹಾಯ ನೀಡಿದ್ದು, ಈ ತ್ಯಾಜ್ಯ ವಿಲೇವಾರಿ ಹೊಣೆ ಹೊತ್ತಿದ್ದ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಸಮಾವೇಶನದ ನಂತರ ಎಲ್ಲ ಜಾಗೆಯನ್ನು ಸ್ವಚ್ಛಗೊಳಿಸಿ, ಉಳಿದ ಅನ್ನಾಹಾರ ಹಾಗೂ ತ್ಯಾಜ್ಯವನ್ನು ಗುಂಡಿ ತೋಡಿ ಮುಚ್ಚುವುದಾಗಿ ಹೇಳಿದ್ದ ನಿರ್ವಹಣಾ ತಂಡದ ಈ ನಿರ್ಲಕ್ಷ್ಯ ಜಾನುವಾರುಗಳ ಸಾವಿಗೆ ಕಾರಣವಾಗಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ಸರ್ಕಾರಿ ಜಾಹೀರಾತುಗಳಲ್ಲಿ ಮಾತ್ರ ಅಭಿವೃದ್ಧಿ: ಕುಮಾರಸ್ವಾಮಿ

ಹಸುಗಳ ಸಾವು ಕಣ್ಣೀರು ಹಾಕಿದ ಅನ್ನದಾತರು:

ವಿಷಾಹಾರ ತಿಂದು ಸಾವನ್ನಪ್ಪಿರುವ ಜಾನುವಾರುಗಳನ್ನು ಕಂಡು ಅನ್ನದಾತರು ಕಣ್ಣೀರು ಹಾಕಿದ್ದಾರೆ. ಕೃಷಿ, ಕುಟುಂಬ ನಿರ್ವಹಣೆಗೆ ಜಾನುವಾರಗಳನ್ನೇ ಆಧರಿಸಿದ್ದ ಕುಟುಂಬ. ಇದೀಗ ಸಾಕು ಸಲುಹಿದ್ದ ಹಸುಗಳು ವಿಷಾಹಾರಕ್ಕೆ ಬಲಿಯಾಗಿರುವುದು ದುಃಖಿತರಾಗಿದ್ದಾರೆ. ರೈತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಅಗ್ರಹಿಸಿದ್ದರಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಇದೆ ಗುರುವಾರ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ

Latest Videos
Follow Us:
Download App:
  • android
  • ios