ನಕಲಿ ಮದ್ಯ ಸೇವಿಸಿ ನಾಲ್ವರ ದುರ್ಮರಣ/ ಒಬ್ಬ ಮಹಿಳೆ ಸಾವು/ ಇಬ್ಬರು ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ/ ಅಬಕಾರಿ ಅಧಿಕಾರಿಗಳ ಅಮಾನತು

ಜೈಪುರ(ಜ. 29) ನಕಲಿ ಮದ್ಯ ಸೇವನೆ ಮಾಡಿ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡಿರುವ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ದುರಂತ ಸಂಭವಿಸಿದ್ದು ಇದಕ್ಕೆ ಸಂಬಂಧಿಸಿ ಅಬಕಾರಿ ಇಲಾಖೆಗಳ 12 ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಮನೆಗೆ ಬಾರದ ಗಂಡ; ಕೊನೆಯಾಯಿತು ಸುರಸುಂದರಿಯ ಬದುಕು

ಮಂಡಲ್ ಘಡ್ ಜಿಲ್ಲೆಯಲ್ಲಿ ಸರನ್ ಕಾ ಖೇಡಾ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಎಲ್ಲಾ ಐವರು ಜನರನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಹಜಾರಿ ಬೈರ್ವಾ, ಸರ್ದಾರ್ ಭಟ್ ಮತ್ತು ದಲೀಲ್ ಸಿಂಗ್, ಮಹಿಳೆ ಸಾತುರಿ ಎಂದು ಗುರುತಿಸಲಾಗಿದ್ದು ನೀತು ಮತ್ತು ಮಂಜು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ. ಇವರೆಲ್ಲರೂ ಒಟ್ಟಿಗೆ ಮದ್ಯ ಸೇವನೆ ಮಾಡಿಲ್ಲ ಎಂಬುದನ್ನು ಪೊಲೀಸರು ಸ್ಪಷ್ಟ ಮಾಡಿದ್ದಾರೆ.