ಕೊರೋನಾ ಪಾಸಿಟಿವ್ ಇದ್ದ ಆರೋಪಿಗಳು ಆಸ್ಪತ್ರೆಯಿಂದ ಎಸ್ಕೇಪ್/ ತಪ್ಪಿಸಿಕೊಂಡಿದ್ದ  ನಾಲ್ವರಲ್ಲಿ ಮೂವರ ಬಂಧನ/ ಆಸ್ಪತ್ರೆ ಎರಡನೇ ಮಹಡಿಯಿಂದ  ತಪ್ಪಿಸಿಕೊಂಡಿದ್ದರು/ 

ಬುಲಂದ್‌ಶಹರ್(ಡಿ. 29) ಕೊರೋನಾ ಪಾಸಿಟಿವ್ ಇದ್ದ ನಾಲ್ವರು ಕೈದಿಗಳು ಬುಲಂದ್‌ಶಹರ್‌ನ ಆಸ್ಪತ್ರೆಯಿಂದ ಭಾನುವಾರ ಪರಾರಿಯಾಗಿದ್ದರು. ನಾಲ್ವರಲ್ಲಿ ಮೂವರು ಮತ್ತೆ ಸೆರೆ ಸಿಕ್ಕಿದ್ದು ಇನ್ನೊಬ್ಬನ ಪತ್ತೆಗೆ ಬಲೆ ಬೀಸಲಾಗಿದೆ.

ಪರಾರಿಯಾದವರಲ್ಲಿ ಖುರ್ಜಾ ನಗರ ಪ್ರದೇಶದಿಂದ ಮತ್ತು ಮತ್ತೊಬ್ಬನನ್ನು ಕೊಟ್ವಾಲಿ ದೇಹತ್‌ನಿಂದ ಬಂಧಿಸಲಾಗಿದೆ. ನಾಲ್ವರನ್ನು ಡಿಸೆಂಬರ್ 19 ರಂದು ಬಂಧಿಸಲಾಗಿತ್ತು. ವಂಚನೆ ಪ್ರಕರಣದಲ್ಲಿ ಇಬ್ಬರು, ಕಳ್ಳತನ ಕೇಸ್ ನಲ್ಲಿ ಒಬ್ಬ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿತ್ತು.

ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR

ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ತಪ್ಪಿಸಿಕೊಂಡಿದ್ದರು ಮೋನು, ಅವರ ಸಹೋದರ ರಿಂಕು, ಯಮೀನ್ ಮತ್ತು ಅರ್ಷದ್ ಎಸ್ಕೇಪ್ ಆಗಿದ್ದರು. ಶೋಧ ನಡೆಸಿದ ಪೊಲೀಸರು ಮೋನು, ರಿಂಕು ಮತ್ತು ಯಮೀನ್ ನನ್ನು ಸೆರೆ ಹಿಡಿದಿದ್ದಾರೆ.